ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟ್ವಿಟರ್, ಫೇಸ್‌ಬುಕ್ ಉತ್ತಮ ರಾಜತಾಂತ್ರಿಕ ಸಾಧನ: ಅಮೆರಿಕಾ (Twitter | Facebook | US | diplomatic tools)
Bookmark and Share Feedback Print
 
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದ ಬಹುತೇಕ ನಾಯಕರುಗಳು ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ಗಳನ್ನು ಬಹುತೇಕವಾಗಿ ಉಪಯೋಗಿಸಿಕೊಳ್ಳುತ್ತಿದೆಯಲ್ಲದೆ ಇದು ರಾಜತಾಂತ್ರಿಕ ಸಾಧನಕ್ಕೆ ಪರಿಣಾಮಕಾರಿಯಾಗಲಿದೆ ಎಂಬ ಭರವಸೆಯನ್ನಿಟ್ಟುಕೊಂಡಿದ್ದಾರೆ.

ಒಬಾಮಾ ಆಡಳಿತ ಉನ್ನತ ಅಧಿಕಾರಿಗಳು ಪ್ರತಿ ಬಾರಿಯೂ ಸರಕಾರ ಕಾರ್ಯ ವೈಖರಿಯನ್ನು ಟ್ವಿಟ್ ಮಾಡಿಕೊಂಡಿರುತ್ತಾರೆ.

21ನೇ ಶತಮಾನದ ರಾಜತಾಂತ್ರಿಕ ಸಾಮರ್ಥ್ಯದ ಸಂಯೋಗದಲ್ಲಿ ತೊಡಗಿಕೊಂಡಿದೆ. ಕಾರ್ಯದರ್ಶಿಗಳು ವಿಶ್ವದೆಲ್ಲೆಡೆ ಸುತ್ತಾಡುವ ಮೂಲಕ ನಾಯಕರನ್ನು ಭೇಟಿ ಮಾಡುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ವಿಶ್ವದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬಹುದಾಗಿದೆ ಎಂದು ಸ್ಟೇಟ್ ಡಿಪರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೆ ತಿಳಿಸಿದ್ದಾರೆ.

ಟ್ವಿಟರ್ ಮತ್ತು ಫೇಸ್‌ಬುಕ್‌ಗಳನ್ನು ಬಳಸುವ ಮೂಲಕ ಇತರ ದೇಶಗಳೊಂದಿಗೆ ಮಾದರಿಯಾಗಿ ನಡೆದುಕೊಳ್ಳುವುದರಲ್ಲಿ ಅಮೆರಿಕಾ ವಿಶ್ವಾಸವಿರಿಸಿಕೊಂಡಿದೆ ಎಂದವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ