ಭಾರತ ವೈದ್ಯಕೀಯ ವಿದ್ಯಾಭ್ಯಾಸ ಮತ್ತು ರೋಗಿಗಳ ಶುಶ್ರೂಶೆಯಲ್ಲಿ ಉತ್ತಮ ಪಡಿಸುವ ನಿಟ್ಟಿನಲ್ಲಿ ಭಾರತ-ಅಮೆರಿಕಾ ವೈದ್ಯರುಗಳ ವಿನಿಯಮ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ. ಆ ಮೂಲಕ ಭಾರತೀಯ ವೈದ್ಯರು ಅಮೆರಿಕಾಕ್ಕೆ ತೆರಳುವ ಮೂಲಕ ವೈದ್ಯಕೀಯ ಅಭ್ಯಾಸಕ್ಕೆ ಸಂಬಂಧಿಸಿದಂತೆ ಮೊದಲ ಅನುಭವ ಪಡೆಯಬಹುದಾಗಿದೆ.
ಭಾರತ ಸರಕಾರದ ನೆರವಿನೊಂದಿಗೆ ಅಮೆರಿಕಾ ವೃತ್ತಿನಿರತ ವಿನಿಮಯ ಅಸೋಸಿಯೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದರೊಂದಿಗೆ ಭಾರತದಲ್ಲಿನ ವೈದ್ಯರುಗಳು ಅಮೆರಿಕಾದಲ್ಲಿ ಸ್ವಲ್ಪ ಕಾಲ ಕಳೆಯುವ ಅವಕಾಶ ಪಡೆಯಲಿದ್ದಾರೆ.
ಈ ಯೋಜನೆಯ ಮೂಲಕ ಇಲ್ಲಿಂದ ತೆರಳುವ ವೈದ್ಯರುಗಳಿಗೆ ಅಲ್ಲಿನ ವೃತ್ತಿನಿರತ ವೈದ್ಯರುಗಳೊಂದಿಗೆ ಹೊಂದಾಣಿಕೆ ನಡೆಸಬಹುದಾಗಿದೆ. ಇದರೊಂದಿಗೆ ವೃತ್ತಿನಿರತ ಹಾಗೂ ಸಂಸ್ಕೃತಿಗೆ ನೆರವಾಗಲಿದೆ ಎಂದು ಅಮೆರಿಕಾ ವೃತ್ತಿನಿರತ ವಿನಿಮಯ ಅಸೋಸಿಯೇಷನ್‌ನ (ಎಪಿಎಕ್ಸ್‌ಎ) ನವೀನ್ ಸಿ ಷಾ ತಿಳಿಸಿದ್ದಾರೆ.