ಅರ್ದಿ ರೈಝಲ್ ಎನ್ನುವ ಎರಡು ವರ್ಷದ ಪೋರನೊಬ್ಬ, ದಿನಕ್ಕೆ 40 ಸಿಗರೇಟುಗಳನ್ನು ಸೇದುವ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡಿರುವ ಮುಸಿ ಬಾನ್‌ಯುವಾಸಿನ್ ಗ್ರಾಮದಲ್ಲಿರುವ ರೈಝಲ್ ಎನ್ನುವ ಎರಡು ವರ್ಷದ ಪೋರ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ದಿನವೊಂದಕ್ಕೆ ಕನಿಷ್ಠ 40 ಸಿಗರೇಟುಗಳನ್ನು ಸೇದುತ್ತಾನೆ. ರೈಜಲ್ 18 ತಿಂಗಳಿನ ಮಗುವಾಗಿದ್ದಾಗ ತಂದೆ ಮಗುವಿಗೆ ಸಿಗರೇಟು ಸೇದಲು ನೀಡಿದ ನಂತರ, ಸಿಗರೇಟು ಚಟಕ್ಕೆ ಅಂಟಿಕೊಂಡಿದ್ದಾನೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ.
ಎರಡು ವರ್ಷ ವಯಸ್ಸಿನ ರೈಜಲ್ 25 ಕೆಜಿ ಭಾರವಾಗಿದ್ದು, ಇತರ ಮಕ್ಕಳಂತೆ ಓಡಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರೈಜಲ್ ಸಂಪೂರ್ಣವಾಗಿ ಸಿಗರೇಟು ಸೇದುವ ಚಟಕ್ಕೆ ಅಂಟಿಕೊಂಡಿದ್ದಾನೆ.ಒಂದು ವೇಳೆ ಅವನಿಗೆ ಸಿಗರೇಟು ದೊರೆಯದಿದ್ದಲ್ಲಿ ಕೋಪಗೊಂಡು ಗೋಡೆಗೆ ತನ್ನ ತಲೆಯನ್ನು ಚಚ್ಚುತ್ತಾನೆ. ಸಿಗರೇಟು ದೊರೆಯದಿದ್ದಲ್ಲಿ ತನಗೆ ತಲೆ ಸುತ್ತಿದಂತಾಗಿ ಅನಾರೋಗ್ಯದ ಅನುಭವವಾಗುತ್ತದೆ ಎಂದು ಹೇಳಿರುವುದಾಗಿ ತಾಯಿ ಡೈಯಾನಾ ಹೇಳಿದ್ದಾರೆ.
ರೈಜಲ್, ಪ್ರತಿನಿತ್ಯ ಒಂದೇ ಬ್ರ್ಯಾಂಡ್‌ನ ಸಿಗರೇಟು ಸೇದುತ್ತಿದ್ದು,ಇದರಿಂದಾಗಿ ತಂದೆ ತಾಯಿಗೆ ದಿನವೊಂದಕ್ಕೆ 5 ಡಾಲರ್ ವೆಚ್ಚ ಮಾಡಬೇಕಾಗಿ ಬಂದಿದೆ.
ರೈಜಲ್ ಸಿಗರೇಟು ಸೇದುವುದನ್ನು ನಿಲ್ಲಿಸಿದಲ್ಲಿ, ಕುಟುಂಬಕ್ಕೆ ಕಾರು ಉಡುಗೊರೆಯಾಗಿ ನೀಡುವುದಾಗಿ ಸರಕಾರಿ ಅಧಿಕಾರಿಗಳು ಅಮಿಷವೊಡ್ಡಿದ್ದಾರೆ.
ಏತನ್ಮಧ್ಯೆ, ರೈಜಲ್ ತಂದೆ ಮೊಹಮ್ಮದ್ ಮಗುವಿನ ಸಿಗರೇಟು ಸೇದುವ ಚಟದಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಅವನು ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ.