ಮುಂದಿನ ವಾರದಿಂದ ಆರಂಭವಾಗಲಿರುವ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅಮೆರಿಕ, ಭಾರತವನ್ನು ಬೆಳೆದು ಬರುತ್ತಿರುವ ಶ್ರೇಷ್ಠ ಜಾಗತಿಕ ಶಕ್ತಿ ಎಂದು ಹೇಳಿಕೊಂಡಿದೆ.
ಅದೇ ವೇಳೆ ಎರಡು ದೇಶಗಳ ನಡುವಣ ದ್ವಿಪಕ್ಷೀಯ ಮಾತುಕತೆಯು ನೂತನ ಮಟ್ಟಕ್ಕೆ ಕೊಂಡೊಯ್ಯಲಿದೆಯೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಭಾರತ ಬೆಳೆದು ಬರುತ್ತಿರುವ ಶ್ರೇಷ್ಠ ಶಕ್ತಿ. ಪರಿಸರ, ಪ್ರಾದೇಶಿಕ ಭದ್ರತೆ, ಭಯೋತ್ಪಾದನೆ ನಿಗ್ರಹ ಹಾಗೂ ಆರ್ಥಿಕ ಸಮಸ್ಯೆಯು ಪ್ರಮುಖವಾಗಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೆ ವರದಿಗಾರರಿಗೆ ತಿಳಿಸಿದರು.
ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ಮಾತುಕತೆಯು ಜೂನ್ 1ರಿಂದ 4ರ ತನಕ ನಡೆಯಲಿದೆ. ಮುಂದಿನ ಎರಡು ದಿನಗಳೊಳಗೆ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ವಾಷಿಂಗ್ಟನ್‌ಗೆ ಆಗಮಿಸುವ ನಿರೀಕ್ಷೆಯಿದೆ.