ಚೀನಾ ಮತ್ತು ಅಮೆರಿಕ ದೇಶಗಳು ಎಂಟು ಶಕ್ತಿ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ವಿಭಾಗದಲ್ಲಿ ಸಹಭಾಗಿತ್ವದಲ್ಲಿ ಮುಂದುವರಿಯಲು ನಿರ್ಧರಿಸಿದೆ.
ಈ ಎಂಟು ಒಪ್ಪಂದದಲ್ಲಿ ಎವಿಯೇಷನ್ ಬಯೋಫ್ಯೂಯಲ್, ಸ್ಮಾರ್ಟ್ ಮೀಟರ್ಸ್ ಮತ್ತು ಸೆಲ್ಯೂಲೊಸಿಕ್ ಎತ್ನಾನಾಲ್ ಒಳಗೊಂಡಿದೆ.
ಆದರೆ ಇತ್ತ ವಿಭಾಗದ ಮುಖಂಡರೂ ಆರ್ಥಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ನಿರಾಕರಿಸಿದರು.
ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಗ್ಯಾರಿ ಲಾಕ್ ಪಾಲ್ಗೊಂಡ್ಡಿದ್ದ ಉನ್ನತ ಮಟ್ಟದ ದ್ವಿಪಕ್ಷೀಯ ಆರ್ಥಿಕ ಮಾತುಕತೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಆ ಮೂಲಕ ವಿಶ್ವದ ಅತೀ ದೊಡ್ಡ ಶಕ್ತಿ ಗ್ರಾಹಕ ರಾಷ್ಟ್ರವಾಗಿರುವ ಅಮೆರಿಕ ಮತ್ತು ಚೀನಾ ನವೀಕರಿಸಬಹುದಾದ ಶಕ್ತಿ ಅಭಿವೃದ್ದಿಗೆ ಕೈಜೋಡಿಸಿಕೊಂಡಿದೆ ಎಂದು ರಾಷ್ಟ್ರೀಯ ಎನರ್ಜಿ ಆಡಳಿತ (ಎನ್‌ಇಎ) ಮುಖಂಡ ಜಾಂಗ್ ಗುಬಾವೋ ತಿಳಿಸಿದ್ದಾರೆ. ಮಾತು ಮುಂದುವರಿಸಿದ ಅವರು ನವೀಕರಿಸಬಹುದಾದ ಓಜಸ್ಸಿನ ಅಭಿವೃದ್ಧಿ ವಿಚಾರದಲ್ಲಿ ಚೀನಾ ಮುಕ್ತವಾಗಿದೆ ಎಂದವರು ಹೇಳಿದರು.