ಕಳೆದ ವರ್ಷ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಳಂ (ಎಲ್‌ಟಿಟಿಇ) ಸಂಘಟನೆಯನ್ನು ಶ್ರೀಲಂಕಾ ಸರಕಾರ ಸದೆಬಡಿಯುವುದರೊಂದಿಗೆ ಪ್ರದೇಶದಲ್ಲಿ ಸುಧಾರಣೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಅಲ್ಲಿಗೆ ತೆರಳುವ ಪ್ರವಾಸಿಗರ ಮೇಲೆ ವಿಧಿಸಲಾಗಿದ್ದ ಪ್ರಯಾಣ ನಿಷೇಧದ ಎಚ್ಚರಿಕೆಯನ್ನು ಅಮೆರಿಕ ರದ್ದುಗೊಳಿಸಿದೆ.
ಅಮೆರಿಕದ ಈ ಕ್ರಮವನ್ನು ಲಂಕಾ ರಾಯಭಾರಿಯಾಗಿರುವ ಜಾಲಿಯಾ ವಿಕ್ರಮ ಸೂರ್ಯ ಸ್ವಾಗತಿಸಿದ್ದಾರೆ.
2009 ನವೆಂಬರ್ 19ರಂದು ಜಾರಿಗೆ ತರಲಾಗಿದ್ದ ಪ್ರಯಾಣದ ಎಚ್ಚರಿಕೆಯನ್ನು 2010, ಮೇ 26ರಂದು ಜಾರಿಗೆ ಬರುವ ರೀತಿಯಲ್ಲಿ ರದ್ದುಗೊಳಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಲಂಕಾದಲ್ಲಿನ ರಕ್ಷಣೆ ಮತ್ತು ಭದ್ರತೆಯ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬಂದ ಹಿನ್ನಲೆಯಲ್ಲಿ ಪ್ರಯಾಣ ಎಚ್ಚರಿಕೆಯನ್ನು ರದ್ದುಗೊಳಿಸಲಾಗಿದೆ.