ಕಳೆದ ತಿಂಗಳಷ್ಟೇ ಇಡೀ ಯೂರೋಪ್‌ನ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದ ಐಸ್‌ಲ್ಯಾಂಡ್‌ನ ಜ್ವಾಲಾಮುಖಿಯು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಹೊರಚಿಮ್ಮುವ ಸಾಧ್ಯತೆಯಿದೆಯೆಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.
ಶೀಘ್ರದಲ್ಲೇ ಮತ್ತೊಮ್ಮೆ ಜ್ವಾಲಾಮುಖಿ ಹೊರಚಿಮ್ಮುವ ಸಾಧ್ಯತೆಯಿದೆ ಎಂದು ಲಂಡನ್‌ನ ಯುನಿವರ್ಸಿಟಿ ಕಾಲೇಜಿನ (ಯುಸಿಎಲ್) ತಜ್ಞರು ತಿಳಿಸಿದ್ದಾರೆ.
ಧೂಳಿನಿಂದ ಆವೃತ್ತವಾಗಿರುವ ವಾತಾವರಣವು ಮತ್ತೊಮ್ಮೆ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಂಶೋಧನಕಾರರು ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ 14ರಂದು ಎಯ್ಜಾಫ್‌ಜಿಯೋಲ್‌ನಲ್ಲಿ ಕಾಣಿಸಿಕೊಂಡ ಜ್ವಾಲಾಮುಖಿಯ ಪರಿಣಾ