ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಮಗನ ಅಂಕಪಟ್ಟಿಯನ್ನು ಕಂಡು ಕೋಪಗೊಂಡ ತಂದೆ, ಅಂಕಪಟ್ಟಿಯ ಹಾಳೆಗಳನ್ನು ತಿನ್ನುವಂತೆ ಮಗನಿಗೆ ಒತ್ತಾಯಿಸಿ ಬಾಯಿಗೆ ತುರುಕಿದ ವಿಚಿತ್ರ ಘಟನೆ ನಡೆದಿದೆ.
ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿರುವುದನ್ನು ಸಹಿಸದ ತಂದೆ, ಅಂಕಪಟ್ಟಿಯ ಹಾಳೆಗಳನ್ನು 12 ವರ್ಷ ವಯಸ್ಸಿನ ಮಗನ ಬಾಯಿಗೆ ಒತ್ತಿಹಿಡಿದು ತಿನ್ನುವಂತೆ ಆದೇಶಿಸಿದನು ಎಂದು ಮೂಲಗಳು ತಿಳಿಸಿವೆ.
ಬಾಲಕನಿಗೆ ಅಂಕಪಟ್ಟಿಯ ಮೂರು ಹಾಳೆಗಳನ್ನು ತಿನ್ನಲು ಕಠಿಣವಾದಾಗ, ಬಾಯಿಯಿಂದ ಹಾಳೆಗಳನ್ನು ತೆಗೆಯಲು ಪ್ರಯತ್ನಿಸಿದಾಗ, ತಂದೆ ಒತ್ತಾಯಪೂರ್ವಕವಾಗಿ ಬೆರಳಿನಿಂದ ಗಂಟಲಿನೊಳಗೆ ನುಗ್ಗಿಸಲು ಪ್ರಯತ್ನಿಸಿದನು ಎಂದು ಸರಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮರುದಿನ ಬಾಲಕ ಶಾಲೆಗೆ ತೆರಳಿದಾಗ ಶಿಕ್ಷಕಿ, ಬಾಲಕನ ತುಟಿ ಹಾಗೂ ಗಂಟಲು ನೋವನ್ನು ಕಂಡು ಘಟನೆಯ ವಿವರಗಳನ್ನು ತಿಳಿದ ನಂತರ ಪೊಲೀಸರಿಗೆ ದೂರು ನೀಡಿದಾಗ, ಆರೋಪಿ ತಂದೆಯನ್ನು ಬಂಧಿಸಲಾಯಿತು ಎಂದು ಡೈಲಿ ಮಿರರ್ ತಿಳಿಸಿದ್ದಾರೆ.
ಮಗ ಪರೀಕ್ಷೆಯಲ್ಲಿ ಕಡಿಮೆಗಳಿಸಿದ್ದರಿಂದ, ನಾನು ಕೋಪದಿಂದ ಮಗುವನ್ನು ಕೋಣೆಯೊಳಗೆ ಕರೆದು ಅಂಕಪಟ್ಟಿಯನ್ನು ತಿನ್ನುವಂತೆ ಒತ್ತಾಯಿಸಿದನು. ನಾನು ಅವಿವೇಕಿಯಾಗಿ ವರ್ತಿಸಿರುವುದರಿಂದ, ಮಗನ ಕ್ಷಮೆಯಾಚಿಸಿದ್ದೇನೆ ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.
ಆರೋಪಿ ತಂದೆ ಎರಡು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ, ಮಗನಿಗೆ ಸಾಂಕೇತಿಕವಾಗಿ 1 ಯುರೋ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.