ಅನಿವಾಸಿ ಭಾರತೀಯ ಡಾ. ನೀರಜ್ ಪಾಟೀಲ್ ಬ್ರಿಟನ್‌ನ ಲ್ಯಾಂಬೆತ್ ನಗರಕ್ಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಕೌನಿಲ್ಸರ್ ಕ್ರಿಸ್ಟೋಫರ್ ವೆಲ್‌ಬೆಲಾವ್ ಉತ್ತರಾಧಿಕಾರಿಯಾಗಿ ಕರ್ನಾಟಕದ ಗುಲ್ಬರ್ಗಾ ಮೂಲದ 40ರ ಹರೆಯದ ನೀರಜ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಪ್ರಸಕ್ತ ಸೈಂಟ್ ಥಾಮಸ್ ಆಸ್ಪತ್ರೆಯ ಗವರ್ನರ್ ಆಗಿರುವ ನೀರಜ್ 'ಎ ಆಂಡ್ ಇ'ನ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಕಮಲಾಪುರದಲ್ಲಿ ಹುಟ್ಟಿ ಬೆಳೆದಿದ್ದ ಪಾಟೀಲ್ 1992ರಲ್ಲಿ ಗುಲ್ಬರ್ಗದ ಎಮ್.ಆರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ನಂತರ ಸ್ವಲ್ಪ ಸಮಯ ಉಸ್ಮಾನಿಯಾ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಅವರು ಹೆಚ್ಚುವರಿ ವಿದ್ಯಾಭ್ಯಾಸಕ್ಕಾಗಿ ಲಂಡನ್ ತೆರಳಿದ್ದರು.
ಇಂಗ್ಲೆಂಡ್‌ನಲ್ಲಿ 14 ವರ್ಷಗಳ ಕಾಲ ವಾಸ್ತವ್ಯ ಹೂಡಿದ್ದ ಅವರು, ಒಟ್ಟು 25 ರಾಷ್ಟ್ರೀಯ ವೈದ್ಯಕೀಯ ಸೇವಾ ಆಸ್ಪತ್ರೆಯಲ್ಲಿ ಅಪಘಾತ ಮತ್ತು ತುರ್ತು ಸಹಾಯನಕರಾಗಿ ಕೆಲಸ ಮಾಡಿದ ಅನುಭವ ನೀರಜ್ ಹೊಂದಿದ್ದಾರೆ.