ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಕಾರ್ಯಾಚರಣೆ; 50 ಉಗ್ರರ ಬಲಿ (Taliban militants | Pakistan | Afghanistan | tribal)
Bookmark and Share Feedback Print
 
ಹಿಂಸಾಪೀಡಿತ ಓರಾಕ್‌ಜೈ ಬುಡಕಟ್ಟು ಪ್ರದೇಶದಲ್ಲಿ ಪಾಕಿಸ್ತಾನ ಸೇನಾಪಡೆಯು ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 50 ಉಗ್ರರು ಬಲಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಆ ಮೂಲಕ ಕಳೆದ ಒಂದು ವರ್ಷದಲ್ಲಿ 700ಕ್ಕೂ ಹೆಚ್ಚು ಉಗ್ರರನ್ನು ನಿಗ್ರಹಿಸಲಾಗಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.

ದಾಬೊರಿ ಮತ್ತು ಗಿಲ್ಜೊ ಪ್ರದೇಶಗಳಲ್ಲಿ ಅವಿತಿದ್ದ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ ಮಿಲಿಟರಿ ಪಡೆಯು 15 ಮಂದಿಯನ್ನು ಕೊಂದು ಹಾಕಿದ್ದಾರೆ. ಘಟನೆಯಲ್ಲಿ 15 ಮಂದಿ ಉಗ್ರರು ಗಾಯಗೊಳಿಸಿದ್ದಾರೆ ವರದಿಗಳು ತಿಳಿಸಿವೆ.

ಅದೇ ರೀತಿ ಕಾಶಾ ಪ್ರದೇಶದಲ್ಲಿಯೂ ಭದ್ರತಾ ಪಡೆ ನಡೆಸಿದ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ