ವನೌಟು ದ್ವೀಪ ರಾಷ್ಟ್ರದಲ್ಲಿ ಶುಕ್ರವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಭೂಕಂಪ ಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೆ ಆರಂಭದಲ್ಲಿ ಹೇರಲಾಗಿದ್ದ ಸುನಾಮಿ ಎಚ್ಚರಿಕೆಯನ್ನು ಹಿಂಪೆಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗುರುವಾರ ಸ್ಥಳೀಯ ಕಾಲಾಮಾನ 4.14 ಭೂಕಂಪ ಸಂಭವಿಸಿತ್ತು. ಭೂಕಂಪದ ಪ್ರಭಾವ 36 ಕೀ.ಮೀ. ಆಳದ ವರೆಗೆ ದಾಖಲಾಗಿತ್ತು ಎಂದು ಅಮೆರಿಕಾ ಭೂವಿಜ್ಞಾನ ಸರ್ವೆ ತಿಳಿಸಿದೆ.
ಈ ಮಧ್ಯೆ ವನೌಟು, ಸೊಲೊಮಾನ್ ದ್ವೀಪ ಮತ್ತು ನ್ಯೂ ಕಾಲೆಡೊನಿಯಾದಲ್ಲಿ ಹೇರಲಾಗಿದ್ದ ದಕ್ಷಿಣ ಫೆಸಿಫಿಕ್ ಸುನಾಮಿ ಭೀತಿಯನ್ನು ತೆರವು ಮಾಡಲಾಗಿದೆ.