ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಹೋರ್: ಉಗ್ರರ ಅಟ್ಟಹಾಸಕ್ಕೆ 10 ಮಂದಿ ಬಲಿ (Lahore Mosque | Fidayeen Attack | Tehrik-i-Taliban)
Bookmark and Share Feedback Print
 
ನಗರದಲ್ಲಿರುವ ಎರಡು ಮಸೀದಿಗಳ ಮೇಲೆ ತೆಹರಿಕ್-ಐ-ತಾಲಿಬಾನ್ ಸಂಘಟನೆಯ ಆತ್ಮಾಹುತಿ ದಳದ ಸದಸ್ಯರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಹಾಗೂ ಗ್ರೇನೆಡ್‌ಗಲಿಂದ ದಾಳಿ ಮಾಡಿ, ಕೆಲವರನ್ನು ಹತ್ತೆ ಮಾಡಿ ಹಲವಾರು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ಭಯೋತ್ಪಾದಕ ಸಂಘಟನೆಗಳು ಜಂಟಿಯಾಗಿ, ಗರಹಿ ಶಾಹು ಮತ್ತು ಮಾಡೆಲ್ ಟೌನ್ ಪ್ರದೇಶಗಳಲ್ಲಿರುವ ಮಸೀದಿಗಳ ಮೇಲೆ ಮಧ್ಯಾಹ್ನ 1.45ಗಂಟೆಯ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಅನಾಮಧೇಯ ಮೂಲಗಳ ಪ್ರಕಾರ, ಮಸೀದಿಗಳಲ್ಲಿ ಸುಮಾರು 1500 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಆತ್ಮಾಹುತಿ ದಳದ ಸದಸ್ಯರು ಮಸೀದಿಯ ದ್ವಾರಗಳನ್ನು ವಶಕ್ಕೆ ತೆಗೆದುಕೊಂಡು, ಮನಂಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಹಲವಾರು ಸ್ಫೋಟಗಳ ಶಬ್ದ ಕೂಡಾ ಕೇಳಿಬಂದಿವೆ ಎಂದು ಮೂಲಗಳು ತಿಳಿಸಿವೆ.

ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಹಿರಿಯರು ,ಮಹಿಳೆಯರು ಮತ್ತು ಮಕ್ಕಳನ್ನು ಮಸೀದಿಯಿಂದ ಹೊರಗೆ ಹೋಗಲು ಅನುಮತಿ ನೀಡಲಾಗಿದ್ದು, ಇತರರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗರಹಿ ಶಾಹು ಮಸೀದಿಯಲ್ಲಿ, ಸೇನಾಪಡೆಗಳು ಮಸೀದಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೂ ಮೇಲ್ಚಾವಣೆಯಲ್ಲಿ ಅವಿತುಕೊಂಡಿರುವ ಉಗ್ರ ಮನಬಂದಂತೆ ಗುಂಡಿನ ದಾಳಿ ನಡೆಸಿ ಸೇನಾಪಡೆಗಳ ಪ್ರಯತ್ನವನ್ನು ವಿಫಲಗೊಳಿಸುತ್ತಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.

ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಎರಡು ಮಸೀದಿಗಳನ್ನು ಸುತ್ತುವರಿದಿದ್ದು,ಮಸೀದಿಯ ಸುತ್ತಲಲ್ಲಿರುವ ಕಟ್ಟಡಗಳ ಮೇಲೆ ಸ್ಥಳಾವಕಾಶ ಪಡೆದಿದ್ದು, ದಾಳಿಗೆ ಸಜ್ಜಾಗಿದ್ದಾರೆ.

ಕೆಲ ವರದಿಗಳ ಪ್ರಕಾರ, ಪಂಜಾಬ್‌ನ ತೆಹರಿಕ್-ಎ-ಕಾಲಿಬಾನ್ ಪಾಕಿಸ್ತಾನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಮಸೀದಿಗಳ ಸುತ್ತಲು ಸೇನಾಪಡೆಗಳ ಮತ್ತು ಉಗ್ರರ ಮಧ್ಯೆ ಘರ್ಷಣೆ ಮುಂದುವರಿದಿದ್ದು,,ಘರ್ಷಣೆಯಲ್ಲಿ ಕನಿಷ್ಠ ನಾಲ್ಕು ಮಂದಿ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ