ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾಗರಿಕ ಪರಮಾಣು ಒಪ್ಪಂದಕ್ಕೆ ಪಾಕ್‌ ಅರ್ಹತೆ:ಗಿಲಾನಿ (Yousuf Raza Gilani | civil nuclear cooperation)
Bookmark and Share Feedback Print
 
ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಪರಮಾಣು ಸಹಕಾರ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನಪಡೆಯಲು ಅರ್ಹತೆ ಪಡೆದಿದೆ ಎಂದು ಪ್ರದಾನಿ ಯೂಸೂಫ್ ರಾಜಾ ಗಿಲಾನಿ ಹೇಳಿದ್ದಾರೆ.

1998ರಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿದ ಅಂಗವಾಗಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಪಾಕ್ ಅರ್ಹತೆ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಾಕಿಸ್ತಾನಕ್ಕೆ ಶಾಂತಿಯುತ ಬಳಕೆಗಾಗಿ, ಪರಮಾಣು ತಂತ್ರಜ್ಞಾನವನ್ನು ನೀಡಲು ವಿಶ್ವದ ಎಲ್ಲಾ ರಾಷ್ಟ್ರಗಳು ಸಹಕಾರ ನೀಡಬೇಕು ಎಂದು ಗಿಲಾನಿ ಮನವಿ ಮಾಡಿದರು.

ದೇಶದಲ್ಲಿ ಕಳೆದ 35 ವರ್ಷಗಳಿಂದ ಪರಮಾಣು ಘಟಕಗಳ ನಿರ್ವಹಣೆಯ ಅನುಭವವನ್ನು ಹೊಂದಿದ್ದು, ಪರಮಾಣು ತಂತ್ರಜ್ಞಾನವನ್ನು ನೀಡಿದಲ್ಲಿ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

1998 ಮೇ 28 ರಂದು ನಡೆಸಿದ ಪರಮಾಣು ಪರೀಕ್ಷೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪರಮಾಣು ತಂತ್ರಜ್ಞಾನ ದೇಶದ ಏಕತೆಗೆ ಹಾಗೂ ಸಾರ್ವಭೌಮತೆ ಕಾಪಾಡಲು ನೆರವಾಗುತ್ತದೆ ಎಂದು ಪ್ರಧಾನಿ ಗಿಲಾನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ