ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಸೀದಿಗಳ ಮೇಲೆ ತಾಲಿಬಾನ್ ದಾಳಿ: ಸಾವಿನ ಸಂಖ್ಯೆ 80ಕ್ಕೆ (minority Ahmadi | Lahore | Taliban guerrillas | mosques)
Bookmark and Share Feedback Print
 
ಅಲ್ಪಸಂಖ್ಯಾತ ಅಹ್ಮದೀಯ ಮುಸ್ಲಿಂರಿಗೆ ಸೇರಿದ ಇಲ್ಲಿನ ಎರಡು ಮಸೀದಿಗಳ ಮೇಲೆ ಶುಕ್ರವಾರ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 80ಕ್ಕೇರಿದ್ದು, ನೂರು ಜನರು ಗಾಯಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಉಗ್ರರು ಮಸೀದಿಗಳನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಒಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯರೂ ಸೇರಿದಂತೆ ಸುಮಾರು 1,500 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇವರನ್ನೆಲ್ಲಾ ಮಸೀದಿಯೊಳಗಿನ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಲಾಗಿತ್ತು.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಅರೆಸೇನಾ ಪಡೆ ಮತ್ತು ಪೊಲೀಸ್ ಕಮಾಂಡೋಗಳು ಸತತವಾಗಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಉಗ್ರರ ಹಿಡಿತದಲ್ಲಿ ಒತ್ತೆಯಾಳಾಗಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 80ಕ್ಕೆ ಏರಿರುವುದಾಗಿ ಜಿಲ್ಲಾಡಳಿತದ ವರಿಷ್ಠ ಸಾಜ್ಜಾದ್ ಭುಟ್ಟಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಏಕಾಏಕಿ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ತಾಲಿಬಾನ್ ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಸ್ವಯಂಚಾಲಿತ ರೈಫಲ್ಸ್, ಗ್ರೆನೇಡ್ ದಾಳಿ ನಡೆಸುವ ಮೂಲಕ ಉಗ್ರರು ಸಾಕಷ್ಟು ಅಟ್ಟಹಾಸಗೈದ ಪರಿಣಾಮ ಎಂಬತ್ತು ಮಂದಿ ಬಲಿಯಾಗಿದ್ದರು.

ಈ ದಾಳಿಯ ಹೊಣೆಯನ್ನು ಪಂಜಾಬ್ ಪ್ರಾಂತ್ಯದ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಹೊತ್ತುಕೊಂಡಿದೆ. ಗಾರಿ ಶಾನು ಮತ್ತು ಮೊಡೆಲ್ ಟೌನ್ ಪ್ರದೇಶದಲ್ಲಿದ್ದ ಮಸೀದಿಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ