ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗ್ಯಾಸ್ ಪೈಪ್ ಲೈನ್ ಒಪ್ಪಂದಕ್ಕೆ ಪಾಕ್-ಇರಾನ್ ಸಹಿ (Pakistan | Iran | gas pipeline | agreement)
Bookmark and Share Feedback Print
 
ಪಾಕಿಸ್ತಾನ ಹಾಗೂ ಇರಾನ್ ನಡುವೆ ಶನಿವಾರ ಪ್ರಮುಖ ಗ್ಯಾಸ್ ಪೈಪ್ ಲೈನ್‌ಗೆ ಸಂಬಂಧಿಸಿದ 'ಸರ್ವೋತ್ತಮ ಖಾತ್ರಿ' ಒಪ್ಪಂದಕ್ಕೆ ಸಹಿ ಹಾಕಿವೆ. ಆ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ 7.5 ಬಿಲಿಯನ್ ಡಾಲರ್ ಮೌಲ್ಯದ ಗ್ಯಾಸ್ ಪೈಪ್ ಲೈನ್ ಯೋಜನೆಗೆ ಮುಂದಾಗಿದೆ.

ಪೈಪ್ ಲೈನ್ ಯೋಜನೆಯು 900 ಕೀ.ಮೀ ಉದ್ದವಾಗಿದ್ದು, ದಕ್ಷಿಣ ಇರಾನ್‌ನ ಆಸಾಲೂಯೆ ಪ್ರದೇಶದಿಂದ ಆರಂಭವಾಗಿ ಪಾಕಿಸ್ತಾನ ಗಡಿ ಪ್ರದೇಶ ಇರಾನ್‌ಶಾರ್ರ್‌ನಲ್ಲಿ ತನಕವಿದೆ. ಯೋಜನೆಯೆಂತೆ ದಕ್ಷಿಣ ಇರಾನ್‌ನ ಪಾರ್ಸ್‌ನಿಂದ ಅನಿಲ ಪೂರೈಕೆಯಾಗಲಿದೆ.

ಒಪ್ಪಂದದ ನಂತರ ಇಸ್ಲಾಮಾಬಾದ್‌ನಲ್ಲಿ ಹೇಳಿಕೆ ನೀಡಿದ ಪಾಕ್ ಪೆಟ್ರೋಲಿಯ ಸಚಿವ ಸೈಯದ್ ನವೀದ್ ಖಮರ್, ಆರಂಭದಲ್ಲಿ ಇರಾನ್, ಪಾಕಿಸ್ತಾನ ಮತ್ತು ಭಾರತದ ನಡುವೆ ಯೋಜನೆ ರೂಪಿಸಲಾಗಿತ್ತು. ಆದರೆ ನಂತರ ಭಾರತವನ್ನು ಕೈಬಿಡಲಾಯಿತು ಎಂದು ಹೇಳಿದರು.

17 ವರ್ಷ ಹಿಂದಿನ ಈ ಯೋಜನೆಯು ಇದೀಗ ಆರಂಭಗೊಂಡಿರುವುದರಲ್ಲಿ ನಿಜಕ್ಕೂ ಸಂತಸ ತಂದಿದೆ. ಇದು ನಮ್ಮ ಕೈಗಾರಿಕೆ ಬೆಳವಣಿಗೆಗಾಗಿನ ಶಕ್ತಿ ಪೂರೈಕೆಯನ್ನು ಖಾತ್ರಿಗೊಳಿಸಲಿದೆ ಎಂದು ಎರಡೂ ದೇಶಗಳ ನಡುವಣ ಗ್ಯಾಸ್ ಮಾರಾಟ ಮತ್ತು ಖರೀದಿ ಒಪ್ಪಂದ (ಜಿಎಸ್‌ಪಿಎ) ಒಪ್ಪಂದದ ಬಗ್ಗೆ ಖರಮ್ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ