ಗ್ವಾಟೆಮಾಲಾದಲ್ಲಿ ಪಖಾಯಾ ಜ್ವಾಲಾಮುಖಿಯಿಂದ ಲಾವಾರಸ ಹೊರಚಿಮ್ಮಿದ ಪರಿಣಾಮ ಇಬ್ಬರು ಸಾವೀಗೀಡಾಗಿದ್ದು, 50ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿರಾರು ಜನರು ಭಯಭೀತರಾಗಿ ಓಡಿಹೋದ ಘಟನೆ ನಡೆದಿದೆ.
ಈಕ್ವೆಡಾರ್‌ನಲ್ಲಿ ತುನ್‌ಗುರಾಹೂವಾ ಜ್ವಾಲಾಮುಖಿಯಿಂದಾಗಿ ಸುತ್ತುಮುತ್ತಲಿನ ಏಳು ಹಳ್ಳಿಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಜ್ವಾಲಾಮುಖಿಯ ಹಿನ್ನಲೆಯಲ್ಲಿ ದೇಶದ ಅತೀ ದೊಡ್ಡ ನಗರವಾಗಿರುವ ಗಾಯಖಿಲ್ ಪ್ರದೇಶದ ವಿಮಾನ ನಿಲ್ದಾಣ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ.
ಜ್ವಾಲಾಮುಖಿ ಹಿನ್ನಲೆಯಲ್ಲಿ ಎಸ್‌ಕ್ಯೂನ್ಲಾ ಮತ್ತು ಗ್ವಾಟೆಮಾಲಾ ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಅಲ್ವಾರೊ ಕುಲಾಮ್ ಘೋಷಿಸಿದ್ದು, ಇಲ್ಲಿ 1,700 ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಮುಂದಿನ ದಿನಗಳಲ್ಲಿ ದಟ್ಟವಾದ ಹೊಗೆ ಮತ್ತಷ್ಟು ಕಾಣಿಸುಕೊಳ್ಳುವ ಸಾಧ್ಯತೆಯಿದೆಯೆಂದು ಭೂಗರ್ಭ ಇಲಾಖೆ ತಜ್ಞರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಐಸ್‌ಲ್ಯಾಂಡ್‌ನಲ್ಲಿ ಕಂಡುಬಂದಿದ್ದ ಜ್ವಾಲಾಮುಖಿ ಹಿನ್ನಲೆಯಲ್ಲಿ ಯುರೋಪ್‌ನ ವ್ಯೋಮಯಾನ ಸಂಪೂರ್ಣವಾಗಿ ಸ್ಧಗಿತಗೊಂಡಿತ್ತು.