ಭಾರೀ ಹಿಂಸಾಚಾರದ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಬ್ಯಾಂಕಾಕ್‌ನಲ್ಲಿ ಮತ್ತು ಇತರ ಪ್ರಾಂತ್ಯದಲ್ಲಿ ಹೇರಲಾಗಿದ್ದ ರಾತ್ರಿ ಕರ್ಫ್ಯೂವನ್ನು ವಾಪಸ್ ಪಡೆಯಲಾಗಿದೆ ಎಂದು ಥಾಯ್ಲೆಂಡ್ ಪ್ರಧಾನಿ ಅಭಿಸಿಟ್ ವೆಜ್ಜಾಜಿವಾ ಶನಿವಾರ ತಿಳಿಸಿದ್ದಾರೆ.
ಪರಿಸ್ಥಿತಿ ಹತೋಟಿಯಲ್ಲಿರುವುದರಿಂದ ಕರ್ಫ್ಯೂ ನಿಷೇಧವನ್ನು ಮುಂದೂಡಲಾಗುತ್ತಿಲ್ಲ ಎಂದವರು ವರದಿಗಾರರಿಗೆ ತಿಳಿಸಿದರು.
ಆಧುನಿಕ ಇತಿಹಾಸದಲ್ಲೇ ಅತೀ ಭಯಕಂರವಾದ ಹಿಂಸಾಚಾರವು ಥಾಯ್ಲೆಂಡ್‌ನಲ್ಲಿ ನಡೆದಿತ್ತು. ಇದರಿಂದಾಗಿ ಮೇ 19 ಕರ್ಫ್ಯೂ ಹೇರಲಾಗಿತ್ತು. ಏಪ್ರಿಲ್ 10ರಂದು ಆರಂಭವಾದ ಹಿಂಸಾಚಾರದಲ್ಲಿ 85 ಮಂದಿ ಸಾವೀಗೀಡಾಗಿದ್ದರಲ್ಲದೆ 2000ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದರು.