ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಲ್ಲೂ ಮಕ್ಕಳು ಇಂಗ್ಲೀಷಿನಲ್ಲಿ ಡುಮ್ಕಿ! (America | English | Education)
Bookmark and Share Feedback Print
 
ಭಾರತದಂತಹ ಬಹುಭಾಷಾ ರಾಷ್ಟ್ರಗಳಲ್ಲಿ ಇಂಗ್ಲೀಷಿನಲ್ಲಿ ಮಕ್ಕಳು ಡುಮ್ಕಿ ಹೊಡೆಯುವುದು ವಿಶೇಷವೇನಲ್ಲ. ಯಾಕೆಂದರೆ ಎಷ್ಟಾದರೂ, ಭಾರತೀಯರಿಗೆ ಇಂಗ್ಲೀಷ್ ಭಾಷೆ ಪರದೇಶದ ಭಾಷೆಯೇ. ಆದರೆ ಅಮೆರಿಕಾದಲ್ಲೂ ಮಕ್ಕಳು ಇಂಗ್ಲೀಷ್ ಪರೀಕ್ಷೆಯಲ್ಲಿ ಡುಮ್ಕಿ ಹೊಡೆಯುತ್ತಾರೆಂದರೆ ನಂಬುತ್ತೀರಾ?

ಹೌದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅಮೆರಿಕದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ಪ್ರೌಢಶಾಲೆಯ ಶೇ.60ರಷ್ಟು ಮಕ್ಕಳು ಇಂಗ್ಲೀಷ್ ಭಾಷೆಯಲ್ಲೇ ಡುಮ್ಕಿ ಹೊಡೆದಿದ್ದಾರೆ. ವಿಶೇಷವೆಂದರೆ, ಈ ಮಕ್ಕಳುಇಂಗ್ಲೀಷ್ ಮಾತನಾಡಬಲ್ಲರು, ವ್ಯವಹರಿಸಬಲ್ಲರು. ಆದರೆ ಪರೀಕ್ಷೆಯಲ್ಲಿ ಮಾತ್ರ ಫೇಲ್!

ಅಮೆರಿಕದ ಮಕ್ಕಳು ಇಂಗ್ಲೀಷ್ ಅನ್ನು ಕಳೆದ ಆರು ವರ್ಷಗಳಿಂದ ಸತತವಾಗಿ ವ್ಯಾಸಂಗ ಮಾಡಿದ್ದರೂ ಕೂಡಾ ಇಂಗ್ಲೀಷ್ ಪ್ರಾವೀಣ್ಯದ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ. ಇಂಗ್ಲೀಷ್ ಕಲಿಕೆಯಲ್ಲಿ ಹಿನ್ನಡೆ ಆಗಿರುವ ಒಂದೇ ಒಂದು ಕಾರಣದಿಂದ ಶೇ.40ರಷ್ಟು ಶಾಲೆಯ ಮಕ್ಕಲು ತಮ್ಮ ಮುಂದಿನ ವಿದ್ಯಾಭ್ಯಾಸದಿಂದ ದೂರವೇ ಉಳಿದಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ