ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್‌ನಲ್ಲಿ ತಾಲಿಬಾನ್ ಉಗ್ರರಿಗೆ ತರಬೇತಿ: ನ್ಯಾಟೋ (Taliban | Afghanistan | NATO | US forces | McChrystal)
Bookmark and Share Feedback Print
 
ಕೆಲವು ತಾಲಿಬಾನ್ ಉಗ್ರರು ಇರಾನ್‌ನಲ್ಲಿ ತರಬೇತಿ ಪಡೆದಿದ್ದಾರೆಂಬುದಕ್ಕೆ ಸ್ಪಷ್ಟ ಪುರಾವೆ ಇರುವುದಾಗಿ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಟೋ ಕಮಾಂಡರ್ ಹಾಗೂ ಅಮೆರಿಕ ಪಡೆಗಳು ಭಾನುವಾರ ತಿಳಿಸಿವೆ.

ಅಫ್ಘಾನಿಸ್ತಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನರಲ್ ಸ್ಟ್ಯಾನ್ಲಿ ಮೆಕ್ ಕ್ರಿಸ್ಟಲ್, ಅಫ್ಘಾನಿಸ್ತಾನ ಸರ್ಕಾರ ಉಗ್ರರನ್ನು ಮಟ್ಟಹಾಕಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ ಅಫ್ಘಾನ್‌ನ ಪಶ್ಚಿಮದ ನೆರೆಯ ದೇಶವಾದ ಇರಾನ್‌ನಲ್ಲಿ ತಾಲಿಬಾನ್ ಉಗ್ರರು ತರಬೇತಿ ಪಡೆದು ಇಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ವಿವರಿಸಿದರು.

ಆ ನಿಟ್ಟಿನಲ್ಲಿ ಇರಾನ್‌ನ ಕಾರ್ಯಚಟುವಟಿಕೆ ಅಫ್ಘಾನ್‌ನಲ್ಲಿ ನಡೆಯುತ್ತಿರುವ ಕುರಿತು ಸಾಕಷ್ಟು ಸಾಕ್ಷ್ಯ ಲಭಿಸಿದೆ. ಅದಕ್ಕೆ ತಾಲಿಬಾನ್ ಉಗ್ರರಿಗೆ ಇರಾನ್ ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡುತ್ತಿರುವುದೇ ಸಾಕ್ಷಿ ಎಂದ ಅವರು, ನ್ಯಾಟೋ ಪಡೆ ತರಬೇತಿ ಪಡೆಯುವುದು ಮತ್ತು ಶಸ್ತ್ರಾಸ್ತ್ರ ಸಾಗಣೆಯನ್ನು ತಡೆಯುವಲ್ಲಿ ಶ್ರಮಿಸುವುದಾಗಿ ಹೇಳಿದರು.

ಇರಾನ್‌ನಲ್ಲಿ ತಾಲಿಬಾನ್ ಉಗ್ರರು ತರಬೇತಿ ಪಡೆಯುತ್ತಿದ್ದಾರೆಂಬ ಬಗ್ಗೆ ಕಳೆದ ತಿಂಗಳು ಮುನ್ಸೂಚನೆ ನೀಡಲಾಗಿತ್ತು ಎಂದು ಸ್ಟ್ಯಾನ್ಲಿ ತಿಳಿಸಿದರು. ಇದರ ಹಿಂದೆ ಇರಾನ್ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಶಾಮೀಲಾಗಿದೆಯೇ ಇಲ್ಲವೇ ಎಂಬುದು ತಿಳಿದಿಲ್ಲ. ಏತನ್ಮಧ್ಯೆ ಎಷ್ಟು ಮಂದಿ ತಾಲಿಬಾನ್ ಉಗ್ರರು ಇರಾನ್‌ನಲ್ಲಿ ತರಬೇತಿ ಪಡೆದಿದ್ದಾರೆಂಬ ಬಗ್ಗೆಯೂ ಅವರು ವಿವರ ನೀಡಿಲ್ಲ,
ಸಂಬಂಧಿತ ಮಾಹಿತಿ ಹುಡುಕಿ