ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಪಂಜಾಬಿನಲ್ಲಿಯೂ ಉಗ್ರರ ವಿರುದ್ಧ ಕಾರ್ಯಾಚರಣೆ? (Lahore | Taliban | Pakistan | Terrorist | Lashkar)
Bookmark and Share Feedback Print
 
ಅಫ್ಘಾನಿಸ್ತಾನ ಗಡಿಯ ಮಾದರಿಯಲ್ಲೇ, ತಮ್ಮ ದೇಶದ ಪಂಜಾಬ್ ಪ್ರಾಂತ್ಯದಲ್ಲಿಯೂ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುವ ಕುರಿತು ಪಾಕಿಸ್ತಾನ ಮೊತ್ತ ಮೊದಲ ಬಾರಿಗೆ ಸುಳಿವು ನೀಡಿದೆ.

ಲಾಹೋರ್‌ನ ಎರಡು ಮಸೀದಿಗಳಲ್ಲಿ ಕಳೆದ ವಾರಾಂತ್ಯ ನಡೆದ ನರಮೇಧದಲ್ಲಿ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ. ಆಂತರಿಕ ವ್ಯವಹಾರ ಸಚಿವ ರಹಮಾನ್ ಮಲಿಕ್ ಅವರು ಸ್ಥಳೀಯ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾರ್ಯಾಚರಣೆ ಕುರಿತು ಸುಳಿವು ನೀಡಿದ್ದಾರೆ.

ಪಂಜಾಬ್ ಮೂಲದ ಜೈಶ್ ಎ ಮೊಹಮದ್, ಲಷ್ಕರ್ ಇ ಜಂಗ್ವಿ ಮತ್ತು ಸಿಪಾ ಇ ಸಾಹಬಾ ಮುಂತಾದ ಬಣಗಳು ತಾಲಿಬಾನ್ ಹಾಗೂ ಅಲ್ ಖಾಯಿದಾ ಜೊತೆ ಕೈಜೋಡಿಸಿವೆ ಎಂಬುದನ್ನು ಒಪ್ಪಿಕೊಂಡ ಸಚಿವರು, ಪಂಜಾಬ್ ದಕ್ಷಿಣ ಭಾಗದಲ್ಲಿ ಭಾರೀ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ