ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೇವೆ ಹೆಸರಲ್ಲಿ ಮತಾಂತರ: 2 ಸಂಘಟನೆಗಳ ಅಮಾನತು (Conversion | Afghanistan | Aid | Charity | Christian | Muslim)
Bookmark and Share Feedback Print
 
ಕಟ್ಟಾ ಇಸ್ಲಾಮಿಕ್ ರಾಷ್ಟ್ರದಲ್ಲಿ ಸೇವೆಯ ಹೆಸರಿನಲ್ಲಿ ಮುಸಲ್ಮಾನರ ಮತಾಂತರ ಕಾರ್ಯದಲ್ಲಿ ತೊಡಗಿದ್ದ ಎರಡು ವಿದೇಶೀ ಕ್ರಿಶ್ಚಿಯನ್ ಸೇವಾ ಸಂಸ್ಥೆಗಳನ್ನು ಅಫ್ಘಾನಿಸ್ತಾನ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

ಅಮೆರಿಕ ಮೂಲದ ಚರ್ಚ್ ವರ್ಲ್ಡ್ ಸರ್ವಿಸ್ ಮತ್ತು ನಾರ್ವೇಜಿಯನ್ ಚರ್ಚ್ ಏಡ್ ಎಂಬ ಎರಡು ಸಂಸ್ಥೆಗಳಿಗೆ ಅಫ್ಘಾನಿಸ್ತಾನದಲ್ಲಿ ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಲು ಅವಕಾಶ ಮಾಡಿಕೊಡಲಾಗಿತ್ತು. ಭಾನುವಾರ ಆಫ್ಘಾನ್ ಟಿವಿಯಲ್ಲಿ ಈ ಆರೋಪಗಳು ಪ್ರಸಾರವಾದ ಬಳಿಕ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಎನ್‌ಜಿಒಗಳ ಚಟುವಟಿಕೆಗಳ ಉಸ್ತುವಾರಿ ವಹಿಸಿರುವ ಸರಕಾರಿ ಅಧಿಕಾರಿ ಮೊಹಮದ್ ಹಶೀಂ ಮಾಯರ್ ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಬೇರೆ ಎನ್‌ಜಿಒಗಳು ಕೂಡ ಇದೇ ಚಟುವಟಿಕೆಯಲ್ಲಿ ನಿರತವಾಗಿವೆಯೇ ಎಂಬ ಕುರಿತಾಗಿಯೂ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ ಮಾಯರ್.

ಎರಡೂ ಸಂಘಟನೆಗಳು ಆರೋಪಗಳನ್ನು ನಿರಾಕರಿಸಿವೆ. ತಾನು ಕಾರ್ಯಾಚರಿಸುತ್ತಿರುವ ಯಾವುದೇ ದೇಶಗಳಲ್ಲಿ ಧಾರ್ಮಿಕ ಮತಾಂತರಕ್ಕೆ ಪ್ರಯತ್ನಿಸುವ ನೀತಿಯನ್ನು ತಾವು ಅನುಸರಿಸುತ್ತಿಲ್ಲ ಎಂದು ನಾರ್ವೇಜಿಯನ್ ಚರ್ಚ್ ಏಡ್ ಮಹಾಕಾರ್ಯದರ್ಶಿ ಆಟ್ಲೆ ಸಾಮರ್‌ಫೆಲ್ಟ್ ಹೇಳಿದ್ದಾರೆ.

ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ವಿದೇಶೀ ಎನ್‌ಜಿಒಗಳ ಸೇವಾ ಚಟುವಟಿಕೆ ಸಂದರ್ಭ ಮತಾಂತರ ಕುರಿತು ಸಾಕಷ್ಟು ಬಾರಿ ಕೂಗೆದ್ದಿದೆ. ಚಾರಿಟಿ ಹೆಸರಿನಲ್ಲಿ ಮತಾಂತರ ಮಾಡುತ್ತಿರುವುದರ ವಿರುದ್ಧ ಸೋಮವಾರ ಕಾಬೂಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆ ತಡೆದು, ಪ್ರತಿಭಟನಾ ಪ್ರದರ್ಶನವನ್ನೂ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ