ಭಾರೀ ಸಂಖ್ಯೆಯಲ್ಲಿ ಮರಣದಂಡನೆ ಜಾರಿಗೊಳಿಸುತ್ತಿರುವುದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಚೀನಾ, ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ಅನ್ವಯವಾಗುವಂತೆ ನಿಯಮಾವಳಿಗೆ ತಿದ್ದುಪಡಿ ಮಾಡಲಾಗುತ್ತದೆ ಎಂದು ತಿಳಿಸಿದೆ.
ಹೊಸ ರೂಪುರೇಷೆಗಳ ಪ್ರಕಾರ, ಚಿತ್ರ ಹಿಂಸೆ ನೀಡಿ ಅಕ್ರಮವಾಗಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಕಾನೂನಿನಡೆ ಮಾನ್ಯತೆ ನೀಡಲಾಗುವುದಿಲ್ಲ.
ಈ ಪ್ರಸ್ತಾಪಿತ ನಿಯಮಾವಳಿಯ ಅನುಸಾರ, ಕಾನೂನುಬದ್ಧ ರೂಪದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳಿದ್ದರೆ ಮಾತ್ರವೇ ಮರಣದಂಡನೆ ವಿಧಿಸಬಹುದಾಗಿದೆ.