ಇರಾನ್‌ನ ದಿವಂಗತ ನಾಯಕ ತನಗೆ ವಿಧಿಸಿದ್ದ ಮರಣ ದಂಡನೆಯು ತನ್ನ ದೈನಂದಿನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿರುವ ಪ್ರಸಿದ್ಧ ಮತ್ತು ವಿವಾದಿತ ಲೇಖಕ ಸಲ್ಮಾನ್ ರಶ್ದೀ, ತನ್ನ ಮೇಲೆ ವಿಧಿಸಲಾಗಿದ್ದ ಈ ಫತ್ವಾ ಒಂದು ಸಣ್ಣ ಸಂಗತಿಯಷ್ಟೇ ಎಂದಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತಾದ ಚರ್ಚಾಗೋಷ್ಠಿಯೊಂದರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ ಲೇಖಕ ಎಲೀ ವೈಸೆಲ್ ಅವರೊಂದಿಗೆ ಭಾಗವಹಿಸಿ ರಶ್ದೀ ಮಾತನಾಡುತ್ತಿದ್ದರು.
ರಶ್ದೀ ಅವರ 'ದಿ ಸಟಾನಿಕ್ ವರ್ಸಸ್' ಪುಸ್ತಕವು ಇಸ್ಲಾಂಗೆ ಅವಮಾನಿಸಿದೆ ಎಂಬ ಕಾರಣಕ್ಕೆ ಅದರ ಲೇಖಕನನ್ನು ಕೊಲ್ಲುವಂತೆ ಇರಾನ್‌ನ ಅಯತೊಲ್ಲಾ ಖೊಮೇನಿ 1989ರಲ್ಲಿ ಫತ್ವಾ ಹೊರಡಿಸಿದ್ದರು. ಈ ಕಾರಣದಿಂದ ದಶಕಗಳ ಕಾಲ ಅವರು ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಳ್ಳಬೇಕಾಗಿತ್ತು.