ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: ಕೋರ್ಟ್‌ನೊಳಗೆ ಮೂವರು ನ್ಯಾಯಾಧೀಶರ ಹತ್ಯೆ (divorce case | Beijing | China | judges | Zhu)
Bookmark and Share Feedback Print
 
ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯುವುದು, ಕೂಗಾಡುವುದು, ಬೈಯ್ಯುವುದನ್ನು ಕೇಳಿದ್ದೀರಿ. ಆದರೆ ಬ್ಯಾಂಕ್‌ವೊಂದರ ಭದ್ರತಾ ದಳದ ವರಿಷ್ಠನೊಬ್ಬ ಚೀನಾದ ಜಿಲ್ಲಾ ನ್ಯಾಯಾಲಯದೊಳಕ್ಕೆ ನುಗ್ಗಿ ಗುಂಡು ಹಾರಿಸಿ ಮೂವರು ನ್ಯಾಯಾಧೀಶರನ್ನು ಹತ್ಯೆ ಮಾಡಿ, ನಂತರ ತಾನು ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವ ಅಪರೂಪದ ಘಟನೆ ನಡೆದಿದೆ.

ಹ್ಯೂಸನ್ ಪ್ರಾಂತ್ಯದ ಯಾಂಗ್‌ಜೊ ನಗರದಲ್ಲಿ ಮಂಗಳವಾರ ನಡೆದ ಈ ಭೀಕರ ಘಟನೆಯಲ್ಲಿ ಇತರ ಮೂರು ಮಂದಿ ನ್ಯಾಯಾಧೀಶರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೂಜುನ್ (46) ಎಂಬ ವ್ಯಕ್ತಿ ಮೂರು ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಚೇದನ ಪಡೆದು, ಪೋಷಕರೊಂದಿಗೆ ವಾಸಿಸುತ್ತಿದ್ದ. ಆದರೆ ದಂಪತಿಗಳ ವಿಚ್ಚೇದನ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಜೂಜುನ್ ಈ ಕೃತ್ಯ ಎಸಗಿರಬೇಕೆಂದು ಕ್ಸಿನ್‌ಹುವಾ ಸುದ್ದಿಸಂಸ್ಥೆಯ ವರದಿ ತಿಳಿಸಿದೆ.

ಅಲ್ಲದೇ ದಂಪತಿಗೆ ಸೇರಿದ ಆಸ್ತಿಯ ವಿಷಯದಲ್ಲಿಯೂ ನ್ಯಾಯಾಲಯ ನೀಡಿದ್ದ ತೀರ್ಪಿನಿಂದ ಆತ ಅತೃಪ್ತಿಗೊಂಡಿದ್ದ ಎಂದು ಕುಟುಂಬದ ಸದಸ್ಯರು ಮತ್ತು ಮಿತ್ರರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ಇತ್ತೀಚೆಗೆ ಇಂತಹ ಸಾಮಾಜಿಕ ಪ್ರತಿಕಾರದ ಘಟನೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇತ್ತೀಚೆಗಷ್ಟೇ ವೈಯಕ್ತಿಕ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಕಿಂಡರ್‌ಗಾರ್ಡನ್ ಚಿಣ್ಣರ ಶಾಲೆಯ ಮೇಲೆ ದಾಳಿ ನಡೆಸಿದ ಪರಿಣಾಮ 18ಮಕ್ಕಳು ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗು ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೂ ನ್ಯಾಯಾಲದಲ್ಲಿಯೇ ಮೂರು ನ್ಯಾಯಾಧೀಶರ ಹತ್ಯೆ ನಡೆದಿರುವುದು ಚೀನಾದ ಅಧಿಕಾರಿಗಳಿಗೆ ಆಘಾತವನ್ನುಂಟುಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ