ಪಾಕಿಸ್ತಾನದ ವಾಯುವ್ಯ ಭಾಗದ ಮೊಹಮಂಡ್ ಬುಡಕಟ್ಟು ಪ್ರದೇಶದಲ್ಲಿನ ವಿದ್ಯಾರ್ಥಿನಿಯರ ಪ್ರೈಮರಿ ಶಾಲೆ ಮತ್ತು ಆರೋಗ್ಯ ಕೇಂದ್ರವೊಂದನ್ನು ತಾಲಿಬಾನ್ ಪರ ಉಗ್ರರು ಧ್ವಂಸಗೊಳಿಸಿದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಕುಷಾಲ್ ಕಾಲೆ ಪ್ರದೇಶದಲ್ಲಿನ ವಿದ್ಯಾರ್ಥಿನಿಯರ ಪ್ರಾಥಮಿಕ ಶಾಲೆ ಮತ್ತು ಗ್ರಾಮೀಣ ಆರೋಗ್ಯ ಕೇಂದ್ರದ ಸುತ್ತ ಸ್ಫೋಟಕವನ್ನು ಇಟ್ಟು ನಂತರ ಉಗ್ರರು ಅದನ್ನು ಸ್ಫೋಟಿಸಿರುವುದಾಗಿ ಸುದ್ದಿಸಂಸ್ಥೆಯೊಂದು ತಿಳಿಸಿದೆ.
ಏಕಕಾಲದಲ್ಲಿ ಮೂರು ಸ್ಫೋಟದಿಂದಾಗಿ ಇಡೀ ಪ್ರದೇಶದಲ್ಲಿ ಭೂಕಂಪನದಂತಹ ಅನುಭವಾಗಿತ್ತು ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯವ್ಯಕ್ತಪಡಿಸಿದ್ದು, ಸಾವು-ನೋವು ಸಂಭವಿಸಿದ ಬಗ್ಗೆ ಏನೂ ತಿಳಿದು ಬಂದಿಲ್ಲ ಎಂದು ವಿವರಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ತಾಲಿಬಾನ್ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದು, ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿನಿಯರ ನೂರಾರು ಶಾಲೆಗಳನ್ನು ಧ್ವಂಸಗೊಳಿಸಿದ್ದಾರೆ.