ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಭಾರತದ ರಾಯಭಾರಿ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಬುಧವಾರ ಉಗ್ರರು ಎರಡು ರಾಕೆಟ್ ದಾಳಿಯನ್ನು ನಡೆಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಇಂದು ಭಾರತದ ರಾಯಭಾರಿ ಜಯಂತ್ ಪ್ರಸಾದ್ ಸೇರಿದಂತೆ ನೂರಾರು ಜನ ಶಾಂತಿ (ಜಿರ್ಗಾ) ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಕೂಡ ಹಾಜರಿದ್ದರು ಎಂದು ಕ್ಸಿನ್‌ಹುವಾ ವರದಿ ತಿಳಿಸಿದೆ.
ಸಾಮಾಜಿಕ, ರಾಜಕೀಯ ಹಾಗೂ ಸಚಿವರು ಸೇರಿದಂತೆ ಸುಮಾರು 1600 ಜನರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿಯೇ ಉಗ್ರರು ಏಕಾಏಕಿ ದಾಳಿ ನಡೆಸಿದ್ದರು. ಕರ್ಜಾಯ್ ಹಾಗೂ ಭಾರತದ ರಾಯಭಾರಿ ಪ್ರಸಾದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿ ಸಭೆ ಅಮೆರಿಕ ಮತ್ತು ನ್ಯಾಟೋ ಸದಸ್ಯರ ಹಿತಾಸಕ್ತಗಾಗಿ ನಡೆಯುತ್ತಿದ್ದು, ಜಿರ್ಗಾ(ಶಾಂತಿ ಸಭೆ) ಬಹಿಷ್ಕರಿಸುವಂತೆ ತಾಲಿಬಾನ್ ಕರೆ ಕೊಟ್ಟಿತ್ತು.
ಕಾಬೂಲ್‌ನಲ್ಲಿ ಆತ್ಮಹತ್ಯಾ ದಾಳಿ ಯತ್ನ, ಬಾಂಬ್ ದಾಳಿಯಲ್ಲಿ ಕರ್ಜಾಯ್ ಪಾರು, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಭಾರತದ ರಾಯಭಾರಿ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಕರ್ಜಾಯ್ ಸಭೆ ವೇಳೆ ಆತ್ಮಹತ್ಯಾ ದಾಳಿ ಯತ್ನ. ಇಬ್ಬರು ಆತ್ಮಹತ್ಯಾ ಬಾಂಬರ್ ದಾಳಿ. ಭಾರತದ ರಾಯಭಾರಿ ಸೇರಿ 1500 ಮಂದಿ ಸೇರಿದ್ದರು.