ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಅಧಿಕಾರಶಾಹಿ ಏಷ್ಯಾದಲ್ಲೇ ಅದಕ್ಷ!: ಸಮೀಕ್ಷೆ (India | Bureaucracy | Survey | China | Asia)
Bookmark and Share Feedback Print
 
ಭಾರತದ ಅಧಿಕಾರಿವರ್ಗವು ಏಷ್ಯಾದಲ್ಲೇ ಅತ್ಯಂತ ಅದಕ್ಷವಾಗಿದ್ದು, ಈ ಅಧಿಕಾರಶಾಹಿಯ ಕಾರ್ಯವೈಖರಿಯು ಚೀನಾಕ್ಕಿಂತಲೂ ಕೆಟ್ಟದಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

12 ದೇಶಗಳ ರ‌್ಯಾಂಕ್ ಪಟ್ಟಿಯಲ್ಲಿ, ಭಾರತವು ಅತ್ಯಂತ ಅದಕ್ಷ ಅಧಿಕಾರಿವರ್ಗವುಳ್ಳ ದೇಶವೆಂದು ಗುರುತಿಸಲ್ಪಟ್ಟಿದ್ದು, ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್ ಇದೆ. ಹಾಂಕಾಂಗ್ ಮೂಲದ ಪೊಲಿಟಿಕಲ್ ಎಂಡ್ ಇಕನಾಮಿಕ್ ರಿಸ್ಕ್ ಕನ್ಸಲ್ಟೆನ್ಸಿ ಈ ಸಮೀಕ್ಷೆ ನಡೆಸಿತ್ತು.

ಭಾರತ ಮತ್ತು ಚೀನಾದಲ್ಲಿ ಸರಕಾರಿ ಅಧಿಕಾರಿವರ್ಗವು ಗಂಭೀರ ಸಮಸ್ಯೆಯೇ ಆಗಿಬಿಟ್ಟಿದೆ. ಆದರೆ ರಾಜಕೀಯ ವ್ಯವಸ್ಥೆಯಲ್ಲಿನ ಭಿನ್ನತೆಗಳಿಂದಾಗಿ, ಚೀನಾಕ್ಕಿಂತಲೂ ಭಾರತದ ಸರಕಾರಿ ಅಧಿಕಾರಿಗಳ ಸಮೂಹ ಅತ್ಯಂತ ಕೆಟ್ಟದಾಗಿದೆ ಎಂದು ಕನ್ಸಲ್ಟೆನ್ಸಿಯನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಒಂದರಿಂದ 10ರವರೆಗಿನ ಅಂಕಗಳ ಆಧಾರದಲ್ಲಿ ರ‌್ಯಾಂಕಿಂಗ್ ನೀಡಲಾಗಿದ್ದು, 10 ಎಂದರೆ ಅತ್ಯಂತ ಕೆಟ್ಟ ಪರಿಸ್ಥಿತಿಯದು. ಭಾರತದ ಅಂಕ 9.41. ಇಂಡೋನೇಷ್ಯಾ 8.59, ಫಿಲಿಪ್ಪೀನ್ಸ್ 8.37, ವಿಯೆಟ್ನಾಂ 8.13 ಹಾಗೂ ಚೀನಾ 7.93 ಅಂಕ ಗಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ