ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ:ಪ್ರಯಾಣಿಕರನ್ನ ಕಾಮ್ರೇಡ್ ಅನ್ನಬೇಡಿ, ಸರ್ ಅಂತ ಕರೆಯಿರಿ! (comrade | Beijing | Maoist philosophy | Global Times | bus staff)
Bookmark and Share Feedback Print
 
ಕಟ್ಟಾ ಮಾವೋವಾದಿ ತತ್ವದಿಂದ ಮುಂದೆ ಸಾಗಿರುವ ಚೀನಾ, ಇದೀಗ ಬಸ್‌ನ ಪ್ರಯಾಣಿಕರಿಗೆ ಕಾಮ್ರೇಡ್ ಎಂದು ಸಂಭೋದಿಸುವ ಬದಲು ಸರ್ ಅಥವಾ ಮೇಡಂ ಎಂದು ಕರೆಯುವಂತೆ ಬೀಜಿಂಗ್ ಬಸ್ ಸಂಸ್ಥೆ ಸೂಚಿಸಿರುವುದಾಗಿ ವರದಿಯೊಂದು ತಿಳಿಸಿದೆ.

ಕಂಪೆನಿಯ ಅಧಿಕೃತ ಶಬ್ದ ಭಂಡಾರದಿಂದಲೇ ಕಾಮ್ರೇಡ್ ಪದವನ್ನು ತೆಗೆದುಹಾಕಲಾಗಿದೆ. ಈ ಪದ ಹಳತಾಗಿದೆ. ಅಲ್ಲದೆ ಸಲಿಂಗಕಾಮಿ ಎಂಬ ಅರ್ಥವನ್ನೂ ನೀಡುತ್ತದೆ. ಆದ್ದರಿಂದ ಸಾರ್ವಜನಿಕ ಸೇವೆಯ ಆಧುನಿಕ ಪರಿಕಲ್ಪನೆಯನ್ನು ಪ್ರತಿನಿಧಿಸುವ ಪದಗಳ ಬಳಕೆಗೆ ಸೂಚಿಸಲಾಗಿದೆ’ ಗ್ಲೋಬಲ್ ಟೈಮ್ಸ್ ವರದಿ ವಿವರಿಸಿದೆ.

ಆ ನಿಟ್ಟಿನಲ್ಲಿ ಆಧುನಿಕತೆಯ ಈ ಯುಗದಲ್ಲಿ ಸಾರ್ವಜನಿಕ ಸೇವೆಯಲ್ಲಿ ಕಾಮ್ರೇಡ್ ಎಂದು ಕರೆಯುವ ಬದಲು ಸರ್ ಅಥವಾ ಮೇಡಂ ಎಂದು ಕರೆಯುವುದೇ ಹೆಚ್ಚು ಸೂಕ್ತವಾಗಿದೆ ಎಂದು ಹೇಳಿದೆ.

ಸೋವಿಯತ್ ರಷ್ಯಾದಿಂದ ಜಪಾನೀಯರ ಮೂಲಕ 1930ರಲ್ಲಿ ಚೀನಾಗೆ ಬಂದ ಈ ಪದದ ಅರ್ಥ 'ಒಂದೇ ಆಶಯ’ ಹೊಂದಿದವರು ಎಂದಾಗಿದೆ. 1949ರ ನಂತರ ಚೀನಾದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಕ್ರಾಂತಿಕಾರಿಗಳೆಂದು ಭಾವಿಸಿ ಪರಸ್ಪರ ಕಾಮ್ರೇಡ್ ಎಂದು ಕರೆದುಕೊಳ್ಳಲಾರಂಭಿಸಿದರು. ಪೊಲೀಸ್ ಅಧಿಕಾರಿಯೊಬ್ಬ ಜೇಬುಗಳ್ಳನನ್ನು ಹಿಡಿದು ನಿನ್ನನ್ನು ಬಂಧಿಸುತ್ತಿದ್ದೇನೆ ಕಾಮ್ರೇಡ್’ ಎಂದು ಹೇಳುತ್ತಾನೆ ಎನ್ನುವ ಜೋಕ್ ಸಹ 90ರ ದಶಕದ ಆರಂಭದಲ್ಲಿ ಚಾಲ್ತಿಯಲ್ಲಿತ್ತು ಎಂದು ಸಮಾಜ ವಿಜ್ಞಾನ ಅಕಾಡೆಮಿಯ ಪ್ರಾಧ್ಯಾಪಕ ವಾಂಗ್ ಜೂಟೈ ವಿವರಿಸಿದ್ದಾರೆ.

ಇಷ್ಟೇ ಅಲ್ಲದೆ, 1990ರಲ್ಲಿ ಚೀನಾದ ಸಲಿಂಗಕಾಮಿಗಳು ಈ ಪದವನ್ನು ಅಪಹರಿಸಿ ಬಳಸಲಾರಂಭಿಸಿದರು. ಹೀಗಾಗಿ ಒಂದು ಕಾಲದ ಈ ಕ್ರಾಂತಿಕಾರಕ ಪದದ ರಾಜಕೀಯ ಬಳಕೆಯ ಬಗ್ಗೆಯೇ ಶಂಕೆಗಳು ಆರಂಭವಾದವು ಎಂದು ಅವರು ಹೇಳಿದ್ದಾರೆ.

ಆ ನಿಟ್ಟಿನಲ್ಲಿ ಪಕ್ಕಾ ಮಾವೋ ಚಿಂತನೆಯನ್ನು ಹೊಂದಿದ್ದ ಚೀನಾ ಬಂಡವಾಳಶಾಹಿ ವ್ಯವಸ್ಥೆಯ ಜೊತೆಗೆ ಸಮಾಜವಾದಿಯತ್ತ ವಾಲಿರುವುದು ಈ ಬದಲಾವಣೆಯಿಂದ ಕಂಡುಬರತೊಡಗಿದೆ.
ಸಂಬಂಧಿತ ಮಾಹಿತಿ ಹುಡುಕಿ