ಬ್ರಿಟಿಷ್ ಇತಿಹಾಸದಲ್ಲೇ ಅತ್ಯಂತ ಕೆಟ್ಟದಾದ ಸಾಮೂಹಿಕ ಹತ್ಯೆ ಪ್ರಕರಣವೊಂದರಲ್ಲಿ, ಟ್ಯಾಕ್ಸಿ ಚಾಲಕ ಡೆರಿಕ್ ಬರ್ಡ್ ಎಂಬಾತ ಮನಬಂದಂತೆ ಗುಂಡು ಹಾರಿಸಿ 12 ಜನರ ಹತ್ಯೆ ಮಾಡಿದ್ದಲ್ಲದೆ, ಕನಿಷ್ಠ 25 ಮಂದಿಯನ್ನು ಗಾಯಗೊಳಿಸಿದ ಪ್ರಕರಣಕ್ಕೆ, ಕೌಟುಂಬಿಕ ವಿವಾದ ಮತ್ತು ಪುಟ್ಟ ಜಗಳವೇ ಕಾರಣ ಎಂದು ಹೇಳಲಾಗಿದೆ. ಘಟನೆ ಬಳಿಕ ಆತ ತನಗೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.