ಮಂಗಳನೆಡೆಗೆ ರಷ್ಯಾ: 2 ವರ್ಷಗಳ ಕಾಲ ಮಂಗಳಲ್ಲಿ 6 ವಿಜ್ಞಾನಿಗಳು!
ಮಾಸ್ಕೋ, ಶುಕ್ರವಾರ, 4 ಜೂನ್ 2010( 09:49 IST )
ND
ಚಂದ್ರನ ಮೇಲೆ ಅಡಿ ಇಟ್ಟು ಬಂದ ಮಾನವ ಇದೀಗ ಮೊದಲ ಬಾರಿಗೆ ಮಂಗಳನ ಮೇಲೆಯೂ ಹೆಜ್ಜೆಯೂರಲು ಹೊರಟಿದ್ದಾನೆ.
ರಷ್ಯಾ ವಿಜ್ಞಾನಿಗಳ ನೇತೃತ್ವದ ತಂಡವೊಂದನ್ನು ಹೊತ್ತ ಬಾಹ್ಯಾಕಾಶ ನೌಕೆಯೊದು ಗುರುವಾರ ಮಂಗಳನತ್ತ ಹೊರಡಲು ಸಿದ್ಧತೆ ನಡೆಸಿದೆ. ಈ ತಂಡದಲ್ಲಿ ಚೀನಾ, ಫ್ರಾನ್ಸ್, ಇಟಲಿ ಹಾಗೂ ಬೆಲ್ಜಿಯಂನ ವಿಜ್ಞಾನಿಗಳು ಸೇರಿದ್ದಾರೆ. ಆರು ದೇಶಗಳ ಬಾಹ್ಯಾಕಾಶ ಯಾನಿಗಳ್ನನು ಹೊತ್ತ ಮಾರ್ಸ್-500 ಮಾಡ್ಯೂಲ್ ಎಂಬ ಬಾಹ್ಯಾಕಾಶ ನೌಕೆ ತನ್ನಲ್ಲಿ ಪ್ರಯೋಗಾಲಯ, ಉಗ್ರಾಣ ಹಾಗೂ ಚಿಕ್ಕ ಉದ್ಯಾನಗಳನ್ನು ಹೊಂದಿದೆ.
ಸುದೀರ್ಘ 520 ದಿನಗಳ ಈ ಯಾತ್ರೆಯಲ್ಲಿ 30 ದಿನಗಳ ಕಾಲ ಆರು ವಿಜ್ಞಾನಿಗಳ ತಂಡ ಸಂಶೋಧನೆ ಕೈಗೊಳ್ಳಲಿದ್ದಾರೆ. ಮಂಗಳನತ್ತ ತೆರಳಲು 250 ದಿನ ಹಾಗೂ ಮರಳಲು 240 ದಿನ ಬೇಕಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವಿಶೇಷವೆಂದರೆ ಈ ತಂಡ ಮಂಗಳನ ಅಧ್ಯಯನಕ್ಕಾಗಿ ಸತತ ಎರಡು ವರ್ಷಗಳ ಸವೆಸಲಿದ್ದು, ಎಲ್ಲವೂ ಯೋಜನೆಯಂತೆ ನಡೆದಲ್ಲಿ ಮೊದಲು ಮಂಗಳನಲ್ಲಿ ಹೆಜ್ಜೆಯಿರಿಸಿದ ಮಾನವರೆಂಬ ಹೆಗ್ಗಳಿಕೆಗೆ ಈ ತಂಡ ಪಾತ್ರವಾಗಲಿದೆ. ಇನ್ನೂ ಖಗೋಳ ವಿಜ್ಞಾನಿಗಳ ಪಾಲಿಗೆ ಮಂಗಳ ಗ್ರಹವೆಂಬುದು ಒಂದು ಕೌತುಕವೇ ಸರಿ.
ವಿಕಿರಣ ಹಾಗೂ ತೂಕ ಕಳೆದುಕೊಳ್ಳುವ ಸಮಸ್ಯೆ ಹೊರತುಪಡಿಸಿದರೆ ಬಹುತೇಕ ಎಲ್ಲ ಬಾಹ್ಯಾಕಾಶ ವಿಜ್ಞಾನಿಗಳೂ ಎದುರಿಸುವ ಸಮಸ್ಯೆಗಳೇ ಇವರಿಗೂ ಸವಾಲಾಗಲಿದೆ. ಭೂಮಿಯನ್ನು ಈ ವಿಜ್ಞಾನಿಗಳು ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದ್ದು, ಈ ಸಂಪರ್ಕ ಭೂಮಿಯನ್ನು ತಲುಪಲು 40 ನಿಮಿಷ ತೆಗೆದುಕೊಳ್ಳಲಿದೆ.