ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 21ನೇ ಶತಮಾನದ ಪ್ರಭಾವಿ ದೇಶ ಭಾರತ: ಒಬಾಮಾ (US President | Barack Obama | India | S.M. Krishna)
Bookmark and Share Feedback Print
 
21ನೇ ಶತಮಾನದ ಪ್ರಭಾವಿ ರಾಷ್ಟ್ರಗಳಲ್ಲಿ ಭಾರತವೂ ಒಂದು ಮತ್ತು ಭಾರತವು ತನ್ನ ವಿಶೇಷ ಮಿತ್ರರಾಷ್ಟ್ರ ಎಂದು ಬಣ್ಣಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕುಟುಂಬ ಸಮೇತ ಭಾರತಕ್ಕೆ ಪ್ರವಾಸ ಮಾಡಲಿರುವುದಾಗಿ ಪ್ರಕಟಿಸಿದ್ದಾರೆ.

ಭಾರತ-ಅಮೆರಿಕಾ ನಡುವಿನ ಮೊತ್ತ ಮೊದಲ ಮಹತ್ವದ ವ್ಯೂಹಾತ್ಮಕ ಮಾತುಕತೆಗಾಗಿ ತನ್ನ ನಿಯೋಗದ ಜತೆ ತೆರಳಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ ಒಬಾಮಾ, ತಾನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಭಾರತಕ್ಕೆ ಬರಲಿರುವುದಾಗಿ ಹೇಳಿದ್ದಾರೆ.

ಅಮೆರಿಕಾ ಆಡಳಿತದ ಹಿರಿಯ ಅಧಿಕಾರಿಗಳ ಪ್ರಕಾರ ಅಧ್ಯಕ್ಷರು ನವೆಂಬರ್ 7ರಿಂದ 10ರ ನಡುವೆ ಭಾರತಕ್ಕೆ ಬರಲಿದ್ದಾರೆ. ಪ್ರವಾಸದ ನಿರ್ದಿಷ್ಟ ದಿನಾಂಕವನ್ನು ಪ್ರವಾಸದ ಕೆಲವೇ ದಿನಗಳ ಮೊದಲು ನಿಗದಿ ಮಾಡಲಾಗುತ್ತದೆ. ಅವರ ಜತೆ ಅಮೆರಿಕಾ ಪ್ರಥಮ ಪ್ರಜೆ ಮಿಚ್ಚೆಲ್ ಒಬಾಮಾ ಕೂಡ ಭಾರತಕ್ಕೆ ಪ್ರಯಾಣಿಸಲಿದ್ದಾರೆ.

ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಜತೆಗೆ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಒಬಾಮಾ ಭಾರತವನ್ನು ತನ್ನ ಆಪ್ತ ಮಿತ್ರರಾಷ್ಟ್ರ ಎಂದು ಹೇಳಿದರು.

ಭಾರತವು 21ನೇ ಶತಮಾನದ ಪ್ರಭಾವಿ ಕೇಂದ್ರಗಳಲ್ಲಿ ಒಂದಾಗಿದೆ. ಸಮಾನ ಹಿತಾಸಕ್ತಿ, ಮೌಲ್ಯಗಳು ಮತ್ತು ನಿಕಟ ಸಂಬಂಧಗಳು ಭಾರತ ಮತ್ತು ಅಮೆರಿಕಾಗಳ ನಡುವೆ ಇರುವುದರಿಂದ ಎರಡೂ ದೇಶಗಳ ಸಂಬಂಧ ವಿಶಿಷ್ಟವಾದುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತವು ಪ್ರಗತಿಯತ್ತ ಸಾಗುತ್ತಿರುವ ಮತ್ತು ಜವಾಬ್ದಾರಿಯುತ ಜಾಗತಿಕ ಶಕ್ತಿ ಎಂಬುದನ್ನು ಒತ್ತಿ ಹೇಳಿರುವ ಅಮೆರಿಕಾ ಅಧ್ಯಕ್ಷ, ಎರಡೂ ದೇಶಗಳ ನಡುವಿನ ಸಂಬಂಧಗಳು 21ನೇ ಶತಮಾನದ ಪಾರಿಭಾಷಿಕ ಪಾಲುದಾರಿಕೆಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಇದೇ ಕಾರಣದಿಂದ ನನ್ನ ಸಂಪುಟದ ಮೂರನೇ ಒಂದು ಭಾಗ ಈಗಾಗಲೇ ಭಾರತಕ್ಕೆ ಭೇಟಿ ನೀಡಿದೆ. ಇದೇ ಕಾರಣದಿಂದ ನನ್ನ ಆಡಳಿತದ ಬಹುತೇಕ ಅಧಿಕಾರಿಗಳು ಸಮಗ್ರ ಮಾತುಕತೆಯ ಭಾಗವಾಗಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ಅಮೆರಿಕಾ ಭೇಟಿಯಲ್ಲಿ ನಾವು ಜತೆಯಾದ ನಂತರ ಕಂಡಿರುವ ಪ್ರಗತಿಗೆ ನಾನು ಧನ್ಯವಾದ ತಿಳಿಸುತ್ತಿದ್ದೇನೆ ಎಂದು ಒಬಾಮಾ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ