ಭಾರತವು ಲೇಹ್ ಮತ್ತು ಕಾರ್ಗಿಲ್‌ಗಳಲ್ಲಿ ನಡೆಸುತ್ತಿರುವ ಚುತಾಕ್ ಮತ್ತು ನಿಮೂ ಬಾಜ್ಗೂ ಹೈಟ್ರೋ ಪ್ರೊಜೆಕ್ಟ್‌ಗಳ ನಿರ್ಮಾಣ ಕಾಮಗಾರಿಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಇದನ್ನು ಆಗಸ್ಟ್ ತಿಂಗಳಲ್ಲಿ ಪಾಕ್ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಪಾಕಿಸ್ತಾನ್ ಇಂಡಸ್ ಜಲ ಆಯುಕ್ತ ಸೈಯದ್ ಜಮಾತ್ ಆಲಿ ಶಾಹ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದಿದ್ದ ಶಾಶ್ವತ ಇಂಡಸ್ ಜಲ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಹ್, ಭಾರತವು ನಿರ್ಮಿಸುತ್ತಿರುವ Uri-II (ಜೇಲಂ), ಚುತಕ್ ಮತ್ತು ನಿಮೂ ಬಾಜ್ಗೂಗಳ (ಎರಡೂ ಇಂಡಸ್‌ನಲ್ಲಿ) ಕುರಿತು ಪಾಕಿಸ್ತಾನದ ಆಕ್ಷೇಪಗಳಿವೆ. ಇವೆರಡೂ ನಿಯಂತ್ರಣಾ ರೇಖೆಗೆ ಹತ್ತಿರದಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಈ ಎರಡೂ ಹೈಡ್ರೋ ಯೋಜನೆಗಳ ಗೇಟುಗಳ ಎತ್ತರ ಮತ್ತು ಕೆಸರಿನ ಸಮಸ್ಯೆಗಳನ್ನು ನಾವು ಎತ್ತುತ್ತಿದ್ದೇವೆ. ಈ ಕುರಿತು ನಮಗೆ ಯಾವುದೇ ನಿಖರ ಮಾಹಿತಿಗಳನ್ನು ಭಾರತ ನೀಡಿಲ್ಲ. ಹಾಗಾಗಿ ನಮ್ಮ ಕಳವಳಗಳು ಹಾಗೆಯೇ ಮುಂದುವರಿದಿದೆ ಎಂದು ಅವರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಅದೇ ಹೊತ್ತಿಗೆ ಭಾರತದ ಜಲ ಆಯುಕ್ತ ಜಿ. ರಂಗನಾಥನ್ ಅವರ ಜತೆಗಿನ ಮಾತುಕತೆಯನ್ನು ಉಲ್ಲೇಖಿಸಿರುವ ಶಾಹ್, ಯಾವುದೇ ಸಮಸ್ಯೆಗಳಿದ್ದರೂ ಸರಕಾರದ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಿಯೇ ಮುಂದುವರಿಯುವುದಾಗಿ ಭರವಸೆ ನೀಡಿದರು.