ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಫೋಟದ ಹಿಂದೆ ಸರ್ಕೋಜಿ ಅವ್ಯವಹಾರ; ರಾಜೀನಾಮೆಗೆ ಆಗ್ರಹ (Pakistan | 2002 terrorist attack in Pakistan | Nicolas Sarkozy | France)
Bookmark and Share Feedback Print
 
ಫ್ರೆಂಚ್ ನೌಕಾಪಡೆಯ 11 ಇಂಜಿನಿಯರ್‌ಗಳು ಸಾವನ್ನಪ್ಪಿದ್ದ ಪಾಕಿಸ್ತಾನದಲ್ಲಿನ 2002ರ ಭಯೋತ್ಪಾದನಾ ದಾಳಿಗೆ ಸಂಬಂಧಪಟ್ಟಂತೆ ನಡೆಸಲಾದ ವಿಸ್ತೃತ ತನಿಖೆಯಲ್ಲಿ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿಯವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕರಾಚಿಯಲ್ಲಿ ನಡೆದಿದ್ದ ಈ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ ಇಂಜಿನಿಯರ್‌ಗಳ ಕುಟುಂಬಿಕರ ವಕೀಲರು ಇದೀಗ ಅಧ್ಯಕ್ಷ ಸರ್ಕೋಜಿಯವರು ರಾಜೀನಾಮೆ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.

ಸಾವನ್ನಪ್ಪಿದವರ ಕುಟುಂಬದವರನ್ನು ಭೇಟಿಯಾದ ಸಂದರ್ಭದಲ್ಲಿ ಸರ್ಕೋಜಿಯವರು ಸುಳ್ಳು ಹೇಳಿದ್ದರು ಎಂದು ನಾವು ಪರಿಗಣಿಸುತ್ತೇವೆ. ಇದರಿಂದಾಗಿ ಬಲಿಪಶುಗಳ ಮನೆಯವರು ಕುಪಿತಗೊಂಡಿದ್ದಾರೆ. ನಮ್ಮ ಪ್ರಕಾರ ಇಡೀ ದೇಶಕ್ಕೆ ಸತ್ಯವನ್ನು ಮರೆ ಮಾಚಲಾಗಿದೆ. ಹಾಗಾಗಿ ಸರ್ಕೋಜಿಯವರು ರಾಜೀನಾಮೆ ನೀಡಬೇಕು ಎಂದು ಒಲಿವರ್ ಮೋರಿಸ್ ತಿಳಿಸಿದ್ದಾರೆ.

ಪಕ್ಷದ ನಿಧಿ ಮತ್ತು ಚುನಾವಣಾ ಖರ್ಚುಗಳಿಗಾಗಿ ಹಣ ಹೊಂದಿಸುವ ಸಲುವಾಗಿ ಸರ್ಕೋಜಿಯವರು ಶಸ್ತ್ರಾಸ್ತ್ರ ಒಪ್ಪಂದಗಳಲ್ಲಿ ಭ್ರಷ್ಟಾಚಾರ ನಡೆಸಿದ್ದರು. ಅವರು ಏಜೆಂಟ್‌ಗಳ ಮೂಲಕ ಕಮಿಷನ್ ಪಡೆದುಕೊಂಡಿದ್ದರು ಎಂದು ಫ್ರಾನ್ಸ್ ಸಂಸದರು ಕೂಡ ಆರೋಪಿಸಿದ್ದು, ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ