ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊಹಿನೂರ್ ವಜ್ರ ವಾಪಸ್ ಕೊಡಲ್ಲ: ಭಾರತಕ್ಕೆ ಬ್ರಿಟನ್ (India | Kohinoor diamond | British colonial rule | Gautam Sengupta)
Bookmark and Share Feedback Print
 
ಬ್ರಿಟೀಷ್ ವಸಾಹತುಶಾಹಿ ಆಡಳಿತ ಸಂದರ್ಭದಲ್ಲಿ ಭಾರತದಿಂದ ದರೋಡೆ ಮಾಡಿದ್ದ ಅಮೂಲ್ಯ 'ಕೊಹಿನೂರ್ ವಜ್ರ' ಮತ್ತು 'ಸುಲ್ತಾನ್‌ಗಂಜ್ ಬುದ್ಧ'ನನ್ನು ವಾಪಸ್ ಮಾಡಬೇಕೆಂಬ ಭಾರತದ ಬೇಡಿಕೆಯನ್ನು ಬ್ರಿಟನ್ ಕಾನೂನು ಅಡಚಣೆಗಳನ್ನು ಮುಂದೊಡ್ಡಿ ತಳ್ಳಿ ಹಾಕಿದೆ.

1963ರ ಬ್ರಿಟೀಷ್ ವಸ್ತು ಸಂಗ್ರಹಾಲಯ ಕಾಯ್ದೆಯು ನಮ್ಮ ರಾಷ್ಟ್ರೀಯ ಮ್ಯೂಸಿಯಂಗಳಿಂದ ವಸ್ತುಗಳನ್ನು ತೆಗೆಯುವುದನ್ನು ತಡೆಯುತ್ತದೆ. ಈ ಕಾನೂನನ್ನು ಬದಲಾಯಿಸುವ ಯಾವುದೇ ಚಿಂತನೆ ಸರಕಾರದ ಮುಂದಿಲ್ಲ ಎಂದು ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಪ್ರಧಾನ ನಿರ್ದೇಶಕ ಗೌತಮ್ ಸೇನ್ ಗುಪ್ತಾ ಅವರ ಮನವಿಗೆ ಈ ಪ್ರತಿಕ್ರಿಯೆಯನ್ನು ನೀಡಲಾಗಿದೆ. ಅಮೂಲ್ಯ ಪ್ರಾಚೀನ ವಸ್ತುಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಯುನಿಸ್ಕೋ ಬೆಂಬಲದೊಂದಿಗೆ ಇತರ ದೇಶಗಳ ಜತೆ ಸೇರಿ ಹೋರಾಟ ಆರಂಭಿಸುವ ಯೋಚನೆಯಲ್ಲಿದೆ ಭಾರತೀಯ ಪುರಾತತ್ವ ಇಲಾಖೆ.

ಕಳ್ಳತನ ಮಾಡಲಾದ ವಸ್ತುಗಳನ್ನು ಮರಳಿ ಪಡೆಯಲು ಇದುವರೆಗೆ ನಡೆಸಿದ ಯತ್ನಗಳು ನಿರರ್ಥಕ ಎಂಬುದು ಈಗಾಗಲೇ ರುಜುವಾತಾಗಿರುವುದರಿಂದ, ನಮ್ಮ ಅಂತಾರಾಷ್ಟ್ರೀಯ ಚಳುವಳಿಯು ಸೂಕ್ತ ಹಾದಿಯನ್ನು ಕಂಡುಕೊಳ್ಳಲು ಯುನಿಸ್ಕೋ ಬೆಂಬಲದ ಅಗತ್ಯವಿದೆ. ಜತೆಗೆ ರಾಜತಾಂತ್ರಿಕ ಮತ್ತು ಕಾನೂನು ಹೋರಾಟವೂ ಅಗತ್ಯ ಎಂದು ಪತ್ರಿಕೆಯೊಂದರ ಜತೆ ಮಾತನಾಡುತ್ತಾ ಗುಪ್ತಾ ಹೇಳಿದ್ದರು.

ಮೊಘಲರ ಕಾಲದ ಕೊಹಿನೂರ್ ವಜ್ರ, ಸುಲ್ತಾನ್‌ಗಂಜ್ ಬುದ್ಧ (ಬರ್ಮಿಂಗ್‌ಹಾಮ್ ಬುದ್ಧ), ಕ್ರಿ.ಶ. 100ಕ್ಕೂ ಮೊದಲಿನ ಅಮರಾವತಿ ಶಿಲ್ಪಗಳು, ಭೋಜ ದೇವಾಲಯಗಳ ಸರಸ್ವತಿ ಪುತ್ಥಳಿ ಸೇರಿದಂತೆ ಹತ್ತು ಹಲವು ಪುರಾತನ ವಸ್ತುಗಳ ಬೇಡಿಕೆಯ ಪಟ್ಟಿಯನ್ನು ಭಾರತೀಯ ಪುರಾತತ್ವ ಇಲಾಖೆ ಹೊಂದಿದೆ.

ವಸಾಹತು ಆಡಳಿತಕ್ಕೊಳಗಾಗಿರುವ ಹಲವು ದೇಶಗಳು ತಮ್ಮ ಪಾರಂಪರಿಕ ವಸ್ತುಗಳನ್ನು ವಾಪಸ್ ಮಾಡುವಂತೆ ಆಗ್ರಹಿಸುತ್ತಿವೆ. ಈ ಪಟ್ಟಿಯಲ್ಲಿ ಮೆಕ್ಸಿಕೋ, ಪೆರು, ಚೀನಾ, ಬೊಲಿವಿಯಾ, ಸಿಪ್ರಸ್ ಮತ್ತು ಗ್ವಾಟೆಮಾಲಾಗಳಿವೆ. ಇವೆಲ್ಲ ದೇಶಗಳಿಗೂ ಯುನಿಸ್ಕೋ ಬೆಂಬಲ ನೀಡಲಿದೆ ಎಂದು ಎಎಸ್ಐ ಮುಖ್ಯಸ್ಥರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ