ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೋಪಾಲ್ ದುರಂತ-ಮರು ತನಿಖೆ ಪ್ರಶ್ನೆಯೇ ಇಲ್ಲ: ಅಮೆರಿಕ (Bhopal tragedy | Union Carbide | US | Washington)
Bookmark and Share Feedback Print
 
ದೇಶವನ್ನೇ ತಲ್ಲಣಗೊಳಿಸಿದ್ದ ಭೋಪಾಲ್ ಅನಿಲ ದುರಂತ ಪ್ರಕರಣದ ಕುರಿತು ಸೋಮವಾರ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಕರಣವನ್ನು ಮತ್ತೆ ಮರು ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಲ್ಲಿ 3 ಸಾವಿರ ಮಂದಿ ಸಾವನ್ನಪ್ಪಿದ್ದರು. ಸುಮಾರು 23 ವರ್ಷಗಳ ಸುದೀರ್ಘ ವಿಚಾರಣೆ ನಂತರ ಭೋಪಾಲ್ ನಗರ ನ್ಯಾಯಾಲಯ ಎಂಟು ಮಂದಿ ದೋಷಿತರು ಎಂದು ಘೋಷಿಸಿ ಕೇವಲ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿ ಜಾಮೀನು ನೀಡಿತ್ತು.

ಇದೀಗ ಪ್ರಕರಣದ ತೀರ್ಪು ತಮಗೆ ತೃಪ್ತಿ ತಂದಿಲ್ಲ ಎಂದು ದುರಂತಕ್ಕೊಳಗಾದ ಕುಟುಂಬಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ ದುರಂತ ಪ್ರಕರಣದ ಬಗ್ಗೆ ಭಾರತದ ನ್ಯಾಯಾಲಯ ಅಂತಿಮ ತೀರ್ಪು ನೀಡುವ ಮೂಲಕ ವಿವಾದ ಇತ್ಯರ್ಥಗೊಂಡಂತಾಗಿದೆ ಎಂದು ಅಮೆರಿಕ ಹೇಳಿದೆ.

ದೇಶದ ಇತಿಹಾಸದಲ್ಲಿಯೇ ನಡೆದ ಅತ್ಯಂತ ದೊಡ್ಡ ದುರಂತ ಇದಾಗಿದೆ ಎಂದು ಅಮೆರಿಕದ ದಕ್ಷಿಣ ಏಷ್ಯಾ ಸಹಾಯಕ ಕಾರ್ಯದರ್ಶಿ ರೋಬೆರ್ಟ್ ಬ್ಲೇಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದು, ಈ ತೀರ್ಪು ಮೃತ ಕುಟುಂಬಗಳಿಗೆ ನ್ಯಾಯ ಒದಗಿಸಿದೆ ಎಂಬ ವಿಶ್ವಾಸ ತಮ್ಮದಾಗಿದೆ. ಅಲ್ಲದೇ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಯಾವುದೇ ವಿಧದಲ್ಲಿಯೂ ಪ್ರಕರಣದ ಮರು ತನಿಖೆಯನ್ನು ನಾವು ನಿರೀಕ್ಷಿಸುವುದಿಲ್ಲ. ಆ ನೆಲೆಯಲ್ಲಿ ಇದು ಮುಗಿದ ಅಧ್ಯಾಯ ಎಂದು ಬ್ಲೇಕ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅಲ್ಲದೇ ಪ್ರಕರಣದ ಪ್ರಮುಖ ಆರೋಪಿಯಾಗಿ ತಲೆಮರೆಸಿಕೊಂಡಿರುವ(?) ಯೂನಿಯನ್ ಕಾರ್ಬೈಡ್ ಕಂಪನಿಯ ಅಧ್ಯಕ್ಷನಾಗಿದ್ದ ವಾರ್ರೆನ್ ಆಂಡರ್‌ಸನ್ ಅವರನ್ನು ಹಸ್ತಾಂತರಿಸುವ ಸಾಧ್ಯತೆ ಇದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಇಲ್ಲ ನಾವು ಆ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ ಎಂದು ತಿಳಿಸುವ ಮೂಲಕ ಅಮೆರಿಕ ಭೋಪಾಲ್ ದುರಂತ ಪ್ರಕರಣವನ್ನು ಸಂಪೂರ್ಣ ಮುಚ್ಚಿಹಾಕಲು ಮುಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ