23 ಜನರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ 17 ಪೊಲೀಸ್ ಅಧಿಕಾರಿಗಳನ್ನು ಬ್ರೆಜಿಲ್‌ನ ಸಾವೋ ಪೌಲೋ ಪೊಲೀಸ್ ಡಿಪಾರ್ಟ್‌ಮೆಂಟ್ ಬಂಧಿಸಿರುವುದಾಗಿ ತಿಳಿಸಿದೆ.
ಏಪ್ರಿಲ್ 17ರಿಂದ 26ರವರೆಗೆ ಗೌರುಜಾ ರೆಸೋರ್ಟ್ ನಗರದಲ್ಲಿ ಪ್ರತೀಕಾರ ತೀರಿಸಿಕೊಂಡ ಪೊಲೀಸರು, ಸುಮಾರು 23 ಜನರನ್ನು ಹತ್ಯೆಗೈದಿರುವುದಾಗಿ ಫೋಲಾ ಸಾವೋ ಪೌಲೋ ಪತ್ರಿಕೆಯೊಂದರ ವರದಿ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 17ಮಂದಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಆದರೆ ಬಂಧಿತ ಅಧಿಕಾರಿಗಳ ಹೆಸರು ಬಹಿರಂಗಗೊಳಿಸಿಲ್ಲ.
ಬಂಧಿತ ಅಧಿಕಾರಿಗಳನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸಿದೆ.