ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡ್ರಗ್ಸ್ ಹಿಂಸಾಚಾರ; ಮೆಕ್ಸಿಕೋ ಗಣಿಯಲ್ಲಿ 55 ಶವ ಪತ್ತೆ (Mexican mine | mine airshaft | drug-related violence | Guerrero)
Bookmark and Share Feedback Print
 
ಮೆಕ್ಸಿಕೋದ ದಕ್ಷಿಣ ಭಾಗದಲ್ಲಿನ ಗಣಿಯೊಂದರಲ್ಲಿ 55 ಕಳೇಬರಗಳು ಪತ್ತೆಯಾಗಿದ್ದು, ಮಾದಕ ವಸ್ತು ಸಂಬಂಧ ಹಿಂಸಾಚಾರದಿಂದ ಮೃತರಾದವರ ದೇಹಗಳನ್ನು ಎಸೆಯಲಾಗಿತ್ತು ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಗೆರೆರೊ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಗಣಿಯ ಪ್ರವೇಶ ದ್ವಾರದದಲ್ಲಿನ ಸುಮಾರು 300 ಅಡಿ ಆಳದಲ್ಲಿ ಕಳೆದ ವಾರ ಬಲಿಪಶುಗಳ ಮೃತದೇಹಗಳು ಪತ್ತೆಯಾಗಿವೆ. ಆರಂಭದಲ್ಲಿ ಇಲ್ಲಿ ಕೇವಲ 25 ದೇಹಗಳಿವೆ ಎಂದು ಹೇಳಲಾಗಿತ್ತು.

ಶನಿವಾರ ರಾತ್ರಿ ಹೊತ್ತಿಗೆ ಇಲ್ಲಿಂದ ಹೊರತೆಗೆಯಲಾದ ಶವಗಳ ಸಂಖ್ಯೆ 55ಕ್ಕೇರಿದೆ. ಇದೀಗ ಹುಡುಕಾಟವನ್ನು ನಾವು ಮುಕ್ತಾಯಗೊಳಿಸಿದ್ದೇವೆ ಎಂದು ಸ್ಥಳೀಯ ಸರಕಾರದ ವಕ್ತಾರ ಆಲ್ಬರ್ಟಿಕೋ ಗಿಂಟೋ ಸಿಯೇರಾ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪತ್ತೆಯಾದ ಬೃಹತ್ ಸಾಮೂಹಿಕ ಶವಗಳ ರಾಶಿ ಇದಾಗಿದೆ ಎಂದೂ ಅವರು ಹೇಳಿದ್ದಾರೆ.

ಡ್ರಗ್ ಕಳ್ಳಸಾಗಣೆ ತಂಡಗಳ ಹಿಂಸಾಚಾರದಿಂದ ನಲುಗುತ್ತಿರುವ ಮೆಕ್ಸಿಕೋ ರಾಜ್ಯಗಳಲ್ಲಿ ಗೆರೆರೊ ಕೂಡಾ ಒಂದಾಗಿದ್ದು, ಸರಕಾರದ ಮಾಹಿತಿಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಒಟ್ಟಾರೆ 22,700 ಮಂದಿ ಸಾವನ್ನಪ್ಪಿದ್ದಾರೆ.

ಇದುವರೆಗೆ ಕೇವಲ ನಾಲ್ಕು ಶವಗಳನ್ನು ಮಾತ್ರ ಗುರುತು ಹಿಡಿಯಲಾಗಿದೆ. ಅದರಲ್ಲಿ ರಾಜ್ಯದ ಕಾರಾಗೃಹದ ವಾರ್ಡನ್ ಕೂಡ ಸೇರಿದ್ದಾನೆ. ಡ್ರಗ್ಸ್ ಗ್ಯಾಂಗ್‌ಗಳು ಹಿಂಸಾಚಾರದಿಂದ ಸಾವನ್ನಪ್ಪಿದವರನ್ನು ಗಣಿಯಲ್ಲಿನ ಆಳ ಕಣಿವೆಯಲ್ಲಿ ಎಸೆದು ಹೋಗುತ್ತಾರೆ ಎಂದು ಹೇಳಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ ಇಲ್ಲಿ ಒಂದರಿಂದ ಆರು ತಿಂಗಳ ನಡುವೆ ಶವಗಳ್ನು ಎಸೆಯಲಾಗಿದೆ. ಹಾಗಾಗಿ ಅವುಗಳನ್ನು ಗುರುತು ಹಿಡಿಯಲು ಕನಿಷ್ಠ ಮೂರರಿಂದ ನಾಲ್ಕು ವಾರಗಳು ಬೇಕಾಗುತ್ತದೆ. ಇದರ ಹಿಂದಿರುವ ಗ್ಯಾಂಗ್‌ಗಳನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ