ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌದಿ ಅರೇಬಿಯಾಕ್ಕೆ ಪರಮಾಣು ಕ್ಷಿಪಣಿ ಪೂರೈಸಿದ್ದ ಚೀನಾ (China | nuke missiles | Saudi Arabia | CIA officer)
Bookmark and Share Feedback Print
 
2000ದಿಂದ 2008ರ ಜಾರ್ಜ್ ಬುಷ್ ಆಡಳಿತಾವಧಿ ಸಂದರ್ಭದಲ್ಲಿ ಚೀನಾವು ಸೌದಿ ಅರೇಬಿಯಾಕ್ಕೆ ಪರಮಾಣು ಸಿಡಿತಲೆಗಳನ್ನು ಪೂರೈಸಿತ್ತು ಎಂದು ರಿಯಾದ್ ಬೇಹುಗಾರಿಕಾ ವರದಿಗಳನ್ನು ನಿರ್ವಹಿಸಿದ್ದ ಅಮೆರಿಕಾ ಬೇಹುಗಾರಿಕಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

2003ರ ಡಿಸೆಂಬರ್‌ಗೂ ಮೊದಲು ಹಲವು ವರ್ಷಗಳ ಕಾಲ ಸೌದಿ ಅರೇಬಿಯಾಕ್ಕೆ ಚೀನಾವು ಪರಮಾಣು ಸಿಡಿತಲೆಗಳನ್ನು ಪೂರೈಸಿತ್ತು ಎಂಬುದು ನನ್ನ ಅಭಿಪ್ರಾಯ ಎಂದು ತನ್ನ ಅಪ್ರಕಟಿತ ಪುಸ್ತಕದ ಅಸ್ಪಷ್ಟ ಹಸ್ತಪ್ರತಿಗಳನ್ನು ಶ್ವೇತಭವನದ ಕಚೇರಿಗೆ ಕಳುಹಿಸಿರುವ ಸಿಐಎ ಅಧಿಕಾರಿ ಜೋನಾಥನ್ ಸ್ಚೆರೆಕ್ ತಿಳಿಸಿದ್ದಾರೆ.

'Patriot Lost' ಎಂಬ ತನ್ನ ಪುಸ್ತಕದ ಪ್ರತಿಯನ್ನು ಬೇಹುಗಾರಿಕಾ ಇಲಾಖೆ ಸೇರಿದಂತೆ ಸರಕಾರದ ಹಲವು ಕಚೇರಿಗಳಿಗೆ ತಾನು ನೇರವಾಗಿ ಅಥವಾ ಇಮೇಲ್ ಮೂಲಕ ರವಾನಿಸಿದ್ದೇನೆ ಎಂದು ಜೋನಾಥನ್ ತಿಳಿಸಿದ್ದಾರೆಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಪ್ರಸಕ್ತ ಜೋನಾಥನ್ ಒದಗಿಸಿರುವ ತನ್ನ ಪುಸ್ತಕದ ಹಸ್ತಪ್ರತಿಯಲ್ಲಿ ತನ್ನ ಹೇಳಿಕೆಗೆ ಹೆಚ್ಚಿನ ಪುರಾವೆಗಳು ಸಿಗುತ್ತಿಲ್ಲ. ಆದರೆ ತನ್ನಲ್ಲಿ ಹೆಚ್ಚು ದಾಖಲೆಗಳಿವೆ ಎಂದು ಅವರು ಹೇಳಿದ್ದಾರೆ.

2004ರಲ್ಲಿ ಜೋನಾಥನ್ ಅಮೆರಿಕಾ ಬೇಹುಗಾರಿಕಾ ಸಂಸ್ಥೆ ಸಿಐಎಗೆ ಸೇರಿದ್ದರು. ಆದರೆ ಸಂಸ್ಥೆಯ ತರಬೇತಿ ಅವಧಿ ಮುಕ್ತಾಯಗೊಳ್ಳುವ ಮೊದಲೇ ಅವರು ಅದೇ ವರ್ಷದ ನವೆಂಬರ್‌ನಲ್ಲಿ ರಾಜೀನಾಮೆ ನೀಡಿ ಹೊರ ಬಂದಿದ್ದರು. ನಂತರ ಅವರು ಮತ್ತೊಂದು ಬೇಹುಗಾರಿಕಾ ಸಂಸ್ಥೆಗೆ ಸೇರಿದ ಬಳಿಕ ಸಿಐಎ ಅಡಿಯಲ್ಲಿ ಸೌದಿ ವಿಭಾಗದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ