ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಬ್ಬಾ..ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು! (Saudi court | kissing | Islam | jail | 90 lashes)
Bookmark and Share Feedback Print
 
ಸಾರ್ವಜನಿಕವಾಗಿ ಅಸಭ್ಯ ವರ್ತನೆ ನಿಷೇಧ ಎಂದು ಗೊತ್ತಿದ್ದರೂ ಕೂಡ ಮತ್ತೆ, ಮತ್ತೆ ಅದೇ ತಪ್ಪು ಮಾಡುವುದು ಮಾಡುತ್ತಾರೆ. ಅದರಲ್ಲೂ ಕೆಲವೊಮ್ಮೆ ಯಾಮಾರಿದರೆ ಏನಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮಾಲ್‌ವೊಂದರಲ್ಲಿ ಯುವತಿಗೆ ಚುಂಬನ ನೀಡಿದ ತಪ್ಪಿಗಾಗಿ ಸೌದಿ ಕೋರ್ಟ್ ಯುವಕನೊಬ್ಬನಿಗೆ ನಾಲ್ಕು ತಿಂಗಳ ಜೈಲುವಾಸ ಜೊತೆಗೆ 90 ಛಡಿಯೇಟಿನ ಶಿಕ್ಷೆ ನೀಡಿದೆ!

ಮಳಿಗೆಯೊಂದರಲ್ಲಿ ಎಲ್ಲಾ ಗ್ರಾಹಕರ ಎದುರೇ ಇಬ್ಬರು ಮಹಿಳೆಯರೊದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಕ್ಯಾಮರದಲ್ಲಿ ಸೆರೆಯಾಗಿತ್ತು. ಇದನ್ನು ಪರಿಶೀಲಿಸಿದ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿರುವುದಾಗಿ ಸರ್ಕಾರಿ ಸ್ವಾಮಿತ್ವದ ದೈನಿಕ ಅಲ್ ಯೋಮ್ ವರದಿ ತಿಳಿಸಿದೆ.

ಕುರ್ಚಿಯಲ್ಲಿ ಕುಳಿತಿದ್ದ ಮಹಿಳೆಗೆ 20ರ ಹರೆಯದ ಯುವಕನೊಬ್ಬ ಅಪ್ಪಿಕೊಂಡು ಚುಂಬಿಸಿದ್ದ ಎಂದು ವರದಿ ತಿಳಿಸಿದೆ. ಆದರೆ ಮತ್ತೊಬ್ಬ ಮಹಿಳೆ ಏನು ಮಾಡುತ್ತಿದ್ದಳು ಎಂಬ ಅಂಶ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಚಿತ್ರಣವಾಗಿಲ್ಲ ಎಂದು ಹೇಳಿದೆ.

ಸಂಬಂಧವಿಲ್ಲದ ಯುವಕ ಮತ್ತು ಯುವತಿ ಸಾರ್ವಜನಿಕ ಸ್ಥಳದಲ್ಲಿ ಅಪ್ಪಿಕೊಳ್ಳುವುದು, ಚುಂಬಿಸುವುದನ್ನು ಇಸ್ಲಾಮ್ ಪೂರ್ಣವಾಗಿ ವಿರೋಧಿಸುತ್ತದೆ. ಆ ನಿಟ್ಟಿನಲ್ಲಿ ದುಬೈನಲ್ಲಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವುದಕ್ಕೆ ನಿಷೇಧ ಇದೆ. ಹಾಗೂ ಅದಕ್ಕೆ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ.

ಯುವಕನ ಅಪರಾಧಕ್ಕಾಗಿ ನ್ಯಾಯಾಲಯ 90ಛಡಿಯೇಟಿನ ಶಿಕ್ಷೆ, ನಾಲ್ಕು ತಿಂಗಳ ಜೈಲುವಾಸ ಹಾಗೂ ಎರಡುವರ್ಷಗಳ ಕಾಲ ಮಳಿಗೆಗಳಿಗೆ ಭೇಟಿ ನೀಡುವುದಕ್ಕೆ ನಿಷೇಧ ಹೇರಿದೆ. ಆದರೆ ಮಹಿಳೆ ಕೋರ್ಟ್ ಕೊಟ್ಟ ತೀರ್ಪಿನ ಮತ್ತೊಂದು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ