ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಫ್-16 ಭಾರತದ ವಿರುದ್ಧ ಬಳಸಿದ್ರೆ ಜಾಗ್ರತೆ:ಪಾಕ್‌ಗೆ ಅಮೆರಿಕ (India | America | Pakistan | F-16 | Islamabad)
Bookmark and Share Feedback Print
 
ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಮಾರುವಾಗ ಅಮೆರಿಕ ಷರತ್ತು ವಿಧಿಸಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಜಗಳದಲ್ಲಿ ಇವುಗಳನ್ನು ಬಳಸಬಾರದಂತೆ ಕಟ್ಟಪ್ಪಣೆ ಮಾಡಿದೆ.

ಜೂನ್ ತಿಂಗಳಾಂತ್ಯದಲ್ಲಿ ಅಮೆರಿಕ ಪಾಕಿಸ್ತಾನಕ್ಕೆ 18 ಎಫ್-16 ಯುದ್ಧ ವಿಮಾನಗಳನ್ನು ಕಳುಹಿಸಲಿದೆ. ಇತ್ತೀಚೆಗೆ ಭಾರತ ಮತ್ತು ಅಮೆರಿಕ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ಮಾರುವ ಮೂಲಕ ಪಾಕಿಸ್ತಾನಕ್ಕೆ ಹೆಚ್ಚಿನ ರಕ್ಷಣಾ ಸಹಾಯ ನೀಡುತ್ತಿದೆ ಎಂದು ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಈ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಅಧ್ಯಕ್ಷ ಭಾರತ ಪಾಕಿಸ್ತಾನಕ್ಕೆ ಮಾರುತ್ತಿರುವ ಯುದ್ಧ ವಿಮಾನಗಳಿಂದ ಯಾವುದೇ ದುರುಪಯೋಗ ಮಾಡಿಕೊಳ್ಳದಂತೆ ಪಾಕ್‌ಗೆ ತಾಕೀತು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಎಫ್-16 ವಿಮಾನಗಳು ಪಾಕಿಸ್ತಾನ ವಾಯು ನೆಲೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರಿಶೀಲಿಸುವುದಲ್ಲದೇ, ತಾಲಿಬಾನ್ ಮತ್ತು ಅಲ್ ಖಾಯಿದಾ ವಿರುದ್ಧ ಹೇಗೆ ಬಳಸಲಾಗುವುದು ಎಂದು ಗಮನಿಸಲಾಗುವುದು ಎಂದು ಅಮೆರಿಕ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ