ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿ ಪಾಕ್ ಪ್ರಜೆ ವಿನಃ ಅಮೆರಿಕದ್ದಲ್ಲ: ಪಿಪಿಪಿ ಕಿಡಿ (Pakistan | PPP | Asif Ali Zardari | America | Islamabad)
Bookmark and Share Feedback Print
 
ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪಾಕಿಸ್ತಾನ ನೆಲೆದ ಪ್ರಜೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸ್ಪಷ್ಟಪಡಿಸಿದ್ದು, ಜರ್ದಾರಿ ಅಮೆರಿಕದ ಪ್ರಜೆ ಎಂಬ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಿದೆ.

ವಿಶ್ವದ ಪ್ರಮುಖ 35ಸಾವಿರ ಗಣ್ಯರ ವಿವರವನ್ನು ನೀಡಿರುವ ವೆಬ್‌ಸೈಟ್‌ವೊಂದರಲ್ಲಿ ಜರ್ದಾರಿ ಅಮೆರಿಕದ ಪ್ರಜೆ ಎಂದು ಉಲ್ಲೇಖಿಸಿರುವುದನ್ನು ಪಿಪಿಪಿ ತೀವ್ರವಾಗಿ ಖಂಡಿಸುವುದಾಗಿ ಪಕ್ಷದ ಮಾಹಿತಿ ಕಾರ್ಯದರ್ಶಿ ಫೌಜಿಯಾ ವಾಹಬ್ ಕಿಡಿಕಾರಿದ್ದಾರೆ.

ಪಾಕಿಸ್ತಾನ ಅಧ್ಯಕ್ಷರನ್ನು ಸದಾ ವಿವಾದದಲ್ಲಿಡುವ ದೃಷ್ಟಿಯಿಂದ ಈ ರೀತಿಯ ಸುದ್ದಿಯನ್ನು ಬಿತ್ತರಿಸುತ್ತಿರುವುದಾಗಿ ಫೌಜಿಯಾ ದೂರಿದ್ದು, ಅದೇ ವರದಿಯನ್ನು ಪಾಕಿಸ್ತಾನದ ಮಾಧ್ಯಮಗಳು ಕೂಡ ಯಾವುದೇ ತನಿಖೆ ಮಾಡದೆ ಮುಖಪುಟದಲ್ಲಿ ಪ್ರಕಟಿಸಿರುವುದಾಗಿ ಆರೋಪಿಸಿದರು.

ಈಗಾಗಲೇ ಕೆಲವು ತಪ್ಪು ಸುದ್ದಿಗಳನ್ನು ಬಿದ್ದಿರಿಸಿರುವ ಈ ವೆಬ್‌ಸೈಟ್ ಅಸಿಫ್ ಅಲಿ ಜರ್ದಾರಿಯವರ ವಿರುದ್ಧವೂ ಸುಳ್ಳು ಮಾಹಿತಿಯ ವರದಿಯನ್ನು ಪ್ರಕಟಿಸಿರುವುದಾಗಿ ಹೇಳಿದರು. ಜರ್ದಾರಿಯವರು ಅಮೆರಿಕ ಪ್ರಜೆ ಎಂದು ಹೇಳಿರುವ ವರದಿಯಲ್ಲಿ ಅವರು ಡಯಾಬಿಟಿಸ್‌ನಿಂದ ಬಳಲುತ್ತಿದ್ದು, ಮಾನಸಿಕ ಒತ್ತಡದ ರೋಗ ಇರುವುದಾಗಿಯೂ ಉಲ್ಲೇಖಿಸಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ