ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇದೀಗ ಸ್ಪೈನ್ ನಗರಗಳಲ್ಲೂ ಬುರ್ಖಾ ನಿಷೇಧ (Barcelona | Spain | Islamic veil ban | Parliament)
Bookmark and Share Feedback Print
 
ಸಾರ್ವಜನಿಕ ಸ್ಥಳಗಳಲ್ಲಿ ಪೂರ್ಣ ಪ್ರಮಾಣದ ಬುರ್ಖಾ ಧರಿಸಲು ನಿಷೇಧ ಹೇರಲು ಸ್ಪೈನ್‌ನ ಬೃಹತ್ ನಗರವಾಗಿರುವ ಬಾರ್ಸಿಲೋನಾ ಮುಂದಾಗಿರುವುದಾಗಿ ಮೇಯರ್ ಸೋಮವಾರ ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳವಾದ ಸಿಟಿ ಹಾಲ್, ಮುನ್ಸಿಪಲ್ ವ್ಯಾಪ್ತಿಯ ಮಾರುಕಟ್ಟೆ ಹಾಗೂ ಶಿಶುರಕ್ಷಣಾ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡಲು ನಿಷೇಧಿಸುವ ಕಾಯಿದೆಗೆ ಸಹಿ ಹಾಕಿರುವುದಾಗಿ ಮೇಯರ್ ಜೋರ್ಡಿ ಹೆರೆಯೂ ಸ್ಪಷ್ಟಪಡಿಸಿದ್ದಾರೆ. ಈ ರೀತಿ ನಿಷೇಧ ಹೇರದಿದ್ದಲ್ಲಿ ಕೆಲವು ಪ್ರದೇಶದಲ್ಲಿ ಒಳಬರುವ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ಸೋಷಿಯಲಿಸ್ಟ್ ಮೇಯರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಬುರ್ಖಾ ನಿಷೇಧವನ್ನು ಕೇವಲ ಒಂದು ಜನಾಂಗವನ್ನು ಗುರಿಯಾಗಿರಿಸಿಕೊಂಡು ನಿಷೇಧಿಸಿಲ್ಲ, ಈ ಕಾಯ್ದೆ ಹೆಲ್ಮೆಟ್ ಧರಿಸಿ ಓಡಾಡುವ ವಾಹನ ಸವಾರರಿಗೂ ಅನ್ವಯವಾಗಲಿದೆ ಎಂದು ಹೇಳಿದರು.

ಅದೇ ರೀತಿ ಈಶಾನ್ಯ ಪ್ರಾಂತ್ಯದ ಕಾಟಾಲೋನಿಯಾ ಮತ್ತು ಲೆರಿಡಾ ಮತ್ತು ಎಲ್ ವೆನ್ರೆಲ್ ನಗರಗಳಲ್ಲಿಯೂ ಸಾರ್ವಜನಿಕ ಕಟ್ಟಡಗಳಲ್ಲಿ ಬುರ್ಖಾ ಧರಿಸುವುದಕ್ಕೆ ಇತ್ತೀಚೆಗೆ ನಿಷೇಧ ಹೇರಲಾಗಿತ್ತು. ಟಾರ್ರಾಗೋನಾ ಮತ್ತು ಗೆರೋನಾ ಪಟ್ಟಣಗಳಲ್ಲಿಯೂ ನಿಷೇಧ ಹೇರಲಾಗಿದೆ ಎಂದು ವಿವರಿಸಿದರು.

ಆದರೆ ಬುರ್ಖಾ ನಿಷೇಧದ ವಿರುದ್ಧ 11 ಮಸೀದಿಗಳ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಸ್ಪೈನ್‌ನ ಸಂವಿಧಾನಾತ್ಮಕ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸ್ಪೈನ್‌ನಲ್ಲಿ ವಲಸಿಗ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಾಟಾಲೋನಿಯಾದಲ್ಲಿ ಪಾಕಿಸ್ತಾನ ಮೂಲದ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ ಸ್ಪೈನ್‌ನ 47ಮಿಲಿಯನ್ ಜನಸಂಖ್ಯೆಲ್ಲಿ, ವಲಸಿಗ ಮುಸ್ಲಿಮರ ಸಂಖ್ಯೆ 1ಮಿಲಿಯನ್ ದಾಟಿದೆ.

ಇತ್ತೀಚೆಗಷ್ಟೇ ಬೆಲ್ಜಿಯಂನಲ್ಲಿ ಬುರ್ಖಾ ಧರಿಸಲು ನಿಷೇಧ ಹೇರಲಾಗಿತ್ತು. ಅದೇ ರೀತಿ ಯುರೋಪ್‌ನಲ್ಲಿ ಬುರ್ಖಾ ನಿಷೇಧಕ್ಕೆ ಮುಂದಾಗಿದ್ದು, ಫ್ರಾನ್ಸ್‌ನಲ್ಲಿ ಸಾಕಷ್ಟು ವಿವಾದಗಳ ನಂತರ ಬುರ್ಖಾ ಧರಿಸಲು ನಿಷೇಧ ಹೇರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ