ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಿರ್ಗಿಸ್ತಾನ್ ಹಿಂಸಾಚಾರ ಅಮಾನವೀಯ: ವಿಶ್ವಸಂಸ್ಥೆ (Kyrgyzstan violence | UN | Mexican | Uzbekistan | Tajiks)
Bookmark and Share Feedback Print
 
ಕಿರ್ಗಿಸ್ತಾನದಲ್ಲಿನ ಜನಾಂಗೀಯ ಹಿಂಸಾಚಾರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದ್ದು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಮೂಲಕ ಶಾಂತಿಯನ್ನು ಕಾಪಾಡಬೇಕೆಂದು ಸಲಹೆ ನೀಡಿದೆ.

ಕಿರ್ಗಿಸ್ತಾನದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ದೇಶದಲ್ಲಿ ಅಶಾಂತಿ ವಾತಾವರಣ ಮೂಡಿದ್ದು, ಜನರು ಭೀತಿಯಿಂದ ಕಾಲಕಳೆಯುವಂತಾಗಿದೆ. ಕೂಡಲೇ ಕಾನೂನು ಸುವ್ಯವಸ್ಥೆ ಮೂಲಕ ಶಾಂತಿ ಮರುಕಳಿಸುವಂತೆ ಸರ್ಕಾರ ಮುಂದಾಗಬೇಕೆಂದು ವಿಶ್ವಸಂಸ್ಥೆಯ ಮೆಕ್ಸಿಕೋ ರಾಯಭಾರಿ ಕ್ಲೌಡೆ ಹೆಲ್ಲೆರ್ ತಿಳಿಸಿದ್ದಾರೆ.

ಉಜ್ಬೇಕಿ ಮತ್ತು ತಜಕಿ ಜನಾಂಗಗಳ ನಡುವಿನ ಘರ್ಷಣೆಯಿಂದಾಗಿ ದೇಶದ ಜನರು ಆತಂಕದಲ್ಲಿ ಇರುವಂತಾಗಿದ್ದು, ಆ ನಿಟ್ಟಿನಲ್ಲಿ ಕಿರ್ಗಿಸ್ತಾನ ಉಭಯ ಕೋಮುಗಳ ನಡುವೆ ಮಾತುಕತೆ ನಡೆಸಿ ವಿವಾದ ಬಗೆಹರಿಸಲು ಕೋರಿದೆ.
ಸಂಬಂಧಿತ ಮಾಹಿತಿ ಹುಡುಕಿ