ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿರೋಧದ ನಡುವೆ ಟ್ಯಾಗೋರ್ 12 ಅಪೂರ್ವ ಕಲಾಕೃತಿ ಹರಾಜು (Rabindranath Tagore | Sotheby | Contemporary Art | London)
Bookmark and Share Feedback Print
 
ಭಾರತದ ತೀವ್ರ ವಿರೋಧದ ಹೊರತಾಗಿಯೂ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್ ಅವರ 12 ಅಪೂರ್ವ ಕಲಾಕೃತಿಗಳು ಲಂಡನ್ನಿನಲ್ಲಿ ಮಂಗಳವಾರ ಸುಮಾರು 250,000 ಪೌಂಡ್ ‌(1.7ಕೋಟಿ ರೂ.)ಗಳಿಗೆ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.

1938ರಲ್ಲಿ ಟ್ಯಾಗೋರ್ ಅವರಿಂದ ಈ ಅಪೂರ್ವ ಕಲಾಕೃತಿ ರಚನೆಗೊಂಡಿತ್ತು. ಟ್ಯಾಗೋರ್ ಇದನ್ನು ತನ್ನ ಹಳೆಯ ಮಿತ್ರರಾದ ಲಿಯೋನಾರ್ಡ್ ಎಲ್ಮ್‌ರಸ್ಟ್ ದಂಪತಿಗಳಿಗೆ ಉಡುಗೊರೆಯಾಗಿ ನೀಡಿದ್ದರು.

ಅಂತೂ ಟ್ಯಾಗೋರ್ ಅವರ 12 ಕಲಾಕೃತಿಗಳು ವಿವಿಧ ಬೆಲೆಗಳಲ್ಲಿ ಹರಾಜಿನಲ್ಲಿ ಮಾರಾಟವಾಗಿದೆ. ಟ್ಯಾಗೋರ್ ಅವರು 1924ರಿಂದ 1941ರವರೆಗೆ ಸುಮಾರು 2,500ರಷ್ಟು ಕಲಾಕೃತಿಗಳನ್ನು ರಚಿಸಿದ್ದರು.

ಟ್ಯಾಗೋರ್ ಅವರ 12 ಕಲಾಕೃತಿಗಳನ್ನು ಲಂಡನ್ನಿನಲ್ಲಿರುವ ಪುರಾತನ ಹರಾಜು ಸ್ಥಳ ಸೋತ್‌ಬೆನಲ್ಲಿ ನಡೆದ ಹರಾಜಿನಲ್ಲಿ ಈ ಕಲಾಕೃತಿಗಳು ಊಹಿಸಿದ ಮೊತ್ತಕ್ಕಿಂತ ಹೆಚ್ಚು ಮೊತ್ತಕ್ಕೆ ಮಾರಾಟವಾದವು.

ಟ್ಯಾಗೋರ್ ಅವರು ರಚಿಸಿರುವ ಕಲಾಕೃತಿಗಳನ್ನು ಹರಾಜು ಹಾಕಲಾಗುತ್ತದೆ ಎಂಬ ಸುದ್ದಿ ಬಹಿರಂಗಗೊಂಡ ನಂತರ ಭಾರತದ ಕೆಲವು ಕಲಾ ಪ್ರೇಮಿಗಳು ಹಾಗೂ ರಾಜಕಾರಣಿಗಳು ಇದನ್ನು ವಿರೋಧಿಸಿ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು. ಈ ಕಲಾಕೃತಿಗಳು ರಾಷ್ಟ್ರೀಯ ಪರಂಪರೆಯಾಗಿದ್ದು, ಅವುಗಳನ್ನು ಭಾರತಕ್ಕೆ ವಾಪಸ್ ತರಬೇಕು ಎಂದು ಆಗ್ರಹಿಸಿದ್ದರು.

ಟ್ಯಾಗೋರ್ ಅವರ ಕಲಾಕೃತಿಯನ್ನು ಸೋತ್‌ಬೆನಲ್ಲಿ ಹರಾಜು ಹಾಕಲಾಗುತ್ತಿದೆ ಎಂಬ ವಿಷಯ ಕೇಳಿದ ನಂತರ ಪಶ್ಚಿಮಬಂಗಾಲದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯಜಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಹರಾಜು ಪ್ರಕ್ರಿಯೆಯನ್ನು ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದು ಕೋರಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ