ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಲಾಡೆನ್ ಹತ್ಯೆಗೆ ಬಂದ ಹಂತಕ ಪೊಲೀಸರ ಅತಿಥಿ! (America | Osama bin Laden | Pakistan | assassin | Gary Brooks)
Bookmark and Share Feedback Print
 
ಅಲ್ ಖಾಯಿದಾ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್‌ನ ಹತ್ಯೆಗೆ ಆಗಮಿಸಿದ್ದ ಅಮೆರಿಕದ ವ್ಯಕ್ತಿಯೊಬ್ಬನನ್ನು ಉತ್ತರ ಪಾಕಿಸ್ತಾನದಲ್ಲಿ ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್ ಹಾಗೂ 40 ಇಂಚು ಉದ್ದದ ಲಾಂಗ್‌ನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನ್-ಪಾಕ್ ಗಡಿಭಾಗದಲ್ಲಿ ಲಾಡೆನ್ ವಾಸಿಸುತ್ತಿರುವ ಮಾಹಿತಿ ತಿಳಿದು ಬಂದಿದ್ದು, ಆ ನಿಟ್ಟಿನಲ್ಲಿ ಆತನನ್ನು ಕೊಲ್ಲುವ ಉದ್ದೇಶದಿಂದ ಅಫ್ಘಾನ್ ಪ್ರಾಂತ್ಯದಿಂದ ಒಳಬಂದಿರುವುದಾಗಿ ಕ್ಯಾಲಿಫೋರ್ನಿಯಾ ಕನ್ಸ್‌ಸ್ಟ್ರಕ್ಷನ್ ಕೆಲಸಗಾರ ಗ್ರೇ ಬ್ರೂಕ್ಸ್ ಫೌಲಕ್ನೆರ್ ಪೊಲೀಸರಿಗೆ ಸೆರೆ ಸಿಕ್ಕಿದ ನಂತರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸ್ ಅಧಿಕಾರಿ ಮುಮ್ತಾಜ್ ಅಹ್ಮದ್ ಖಾನ್ ವಿವರಿಸಿದ್ದಾರೆ.

ಉತ್ತರ ಪಾಕಿಸ್ತಾನದ ಒಳನುಸುಳಲು ಬ್ರೂಕ್ಸ್ ಕಾಡು ಪ್ರದೇಶವಾದ ಚಿತ್ರಾಲ್‌ನ್ನು ಆಯ್ಕೆ ಮಾಡಿಕೊಂಡಿದ್ದ. ಆತ ಬಿನ್ ಲಾಡೆನ್‌ನನ್ನು ಕೊಲ್ಲಲು ಬಂದಿರುವುದಾಗಿ ತಿಳಿಸಿದಾಗ ಮೊದಲು ನಾವು ನಕ್ಕುಬಿಟ್ಟಿದ್ದೇವು. ಆದರೆ ಆತನಿಂದ ಪಿಸ್ತೂಲ್, ಲಾಂಗ್, ಡ್ಯಾಗೆರ್ ಮತ್ತು ರಾತ್ರಿ ಬಳಸುವ ಟಾರ್ಚ್ ವಶಪಡಿಸಿಕೊಂಡ ನಂತರ ಆತನ ಉದ್ದೇಶ ಸ್ಪಷ್ಟವಾಯಿತು ಎಂದು ಖಾನ್ ಹೇಳಿದರು.

ಇದೀಗ ಪೇಶಾವರದ ಗುಪ್ತಚರ ಇಲಾಖೆಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಬ್ರೂಕ್ಸ್ ಈಗಾಗಲೇ ಪಾಕಿಸ್ತಾನಕ್ಕೆ ಏಳು ಬಾರಿ ಭೇಟಿ ನೀಡಿದ್ದಾನಂತೆ. ಅದೇ ರೀತಿ ಚಿತ್ರಾಲ್ ಮೂಲಕ ಆಗಮಿಸುತ್ತಿರುವುದು ಮೂರನೇ ಬಾರಿಯಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ಪರ್ವತ ಪ್ರದೇಶಗಳಿಂದ ಆವೃತ್ತವಾಗಿರುವ ಚಿತ್ರಾಲ್‌ಗೆ ಪಾಶ್ಚಾತ್ಯ ಪ್ರವಾಸಿಗರು ಆಗಮಿಸುತ್ತಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ