ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11: ರಾಣಾ ವಿಚಾರಣೆ ನಂತ್ರ ಹೆಡ್ಲಿಗೆ ಶಿಕ್ಷೆ ಘೋಷಣೆ: ವಕೀಲ (Lashker-e-Toiba | David Headley | Pakistan | Tahawwur Hussain Rana)
Bookmark and Share Feedback Print
 
ಮುಂಬೈ ದಾಳಿ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆಯಾಗಿರುವ ತಹಾವ್ವೂರ್ ಹುಸೈನ್ ರಾಣಾನ ವಿಚಾರಣೆ ಪೂರ್ಣಗೊಂಡ ನಂತರವೇ ಡೇವಿಡ್ ಹೆಡ್ಲಿಗೆ ಮುಂದಿನ ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆ ಇರುವುದಾಗಿ ಹೆಡ್ಲಿ ವಕೀಲರು ತಿಳಿಸಿದ್ದಾರೆ.

ರಾಣಾನ ವಿಚಾರಣೆ ಅಂತಿಮಗೊಂಡ ನಂತರವೇ ಮುಂಬೈ ದಾಳಿ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಹೆಡ್ಲಿಗೆ ಮುಂದಿನ ವರ್ಷ ಕೋರ್ಟ್ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಶಿಕ್ಷೆ ಜಾರಿಗುವುದಿಲ್ಲ ಎಂದು ವಕೀಲ ಜಾನ್ ಥೆಯ್ಸ್ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಶಾಮೀಲಾಗಿರುವ ರಾಣಾ, ಸಹ ಆರೋಪಿತರಾದ ಅಲ್ ಖಾಯಿದಾದ ಇಲ್ಯಾಸ್ ಕಾಶ್ಮೀರಿ, ಪಾಕಿಸ್ತಾನ ಮಿಲಿಟರಿಯ ನಿವೃತ್ತ ಮೇಜರ್ ಅಬ್ದುರ್ ರೆಹಮಾನ್ ಹಾಸಿಮ್ ಸೈಯದ್ ಕುರಿತಂತೆ ಹೆಡ್ಲಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಪೂರ್ಣ ಪ್ರಮಾಣದ ಮಾಹಿತಿ ನೀಡಿರುವುದಾಗಿ ವಿವರಿಸಿದ್ದಾರೆ. ಆದರೆ ಕಾಶ್ಮೀರಿ ಮತ್ತು ಸೈಯದ್ ತಲೆಮರೆಸಿಕೊಂಡಿದ್ದಾರೆ.

ಹೆಡ್ಲಿಯ ವಿಚಾರಣೆಯ ಮಾಹಿತಿಯನ್ನು ಆಧರಿಸಿ ನ್ಯಾಯಾಲಯ ಶಿಕ್ಷೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ರಾಣಾ ವಿಚಾರಣೆ ನವೆಂಬರ್ 1ರಿಂದ ಆರಂಭವಾಗುವ ಸಾಧ್ಯತೆ ಇದೆ. ಅಲ್ಲದೇ ಭಯೋತ್ಪಾದನೆಗೆ ಸಂಬಂಧಿಸಿದಂತೆ ತಾನು ಯಾವುದೇ ಶಸ್ತ್ರಾಸ್ತ್ರವನ್ನು ಸರಬರಾಜು ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ