ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾದ್ರಿಗಳ ಲೈಂಗಿಕ ಕಿರುಕುಳ; ಮತ್ತೆ ಕ್ಷಮೆ ಕೇಳಿದ ಪೋಪ್ (Pope Benedict | paedophile priest scandals | Roman Catholic Church | priests)
Bookmark and Share Feedback Print
 
ರೋಮನ್ ಕ್ಯಾಥೊಲಿಕ್ ಚರ್ಚುಗಳಿಗೆ ಮಸಿ ಬಳಿದಿದ್ದ ಪಾದ್ರಿಗಳ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೋಪ್ ಬೆನೆಡಿಕ್ಟ್ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದು, ಇಂತಹ ಪ್ರಸಂಗಗಳು ಮುಂದೆ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇಲ್ಲಿನ ಸೈಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ವಿಶ್ವದಾದ್ಯಂತದ 15,000ಕ್ಕೂ ಹೆಚ್ಚು ಪಾದ್ರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪೋಪ್, ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಿಷಾದ ವ್ಯಕ್ತಪಡಿಸಿದರು. ಮುಂದೆ ಇಂತಹ ಕಿರುಕುಳ ಪ್ರಕರಣಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ಭರವಸೆ ನೀಡಿದರು.

ಪಾದ್ರಿಗಳ ವರ್ಷದ ಕಾರ್ಯಕ್ರಮವೊಂದಕ್ಕಾಗಿ ರೋಮ್‌ಗೆ ಬಂದಿದ್ದ ಸಾವಿರಾರು ಪಾದ್ರಿಗಳು ಬಿಳಿ ದಿರಿಸಿನಿಂದ ವಿನೀತರಾಗಿ ಪೋಪ್ ಕರೆಗೆ ಓಗೊಡುತ್ತಿದ್ದರು.

ಪಾದ್ರಿಗಳ ಸಮಾಜದ ಸಂಸ್ಕಾರಕ್ಕೆ ಚ್ಯುತಿ ಬರುವಂತೆ ಇದು ನಡೆದಿದೆ. ಎಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪಾದ್ರಿಗಳ ಪಾಪ ಕಾರ್ಯಗಳು ಬೆಳಕಿಗೆ ಬಂದಿವೆ. ಖಂಡಿತಾ ಇಂತಹ ಪ್ರಕರಣಗಳು ಮತ್ತೆ ನಡೆಯದಂತೆ ತಡೆಯುತ್ತೇವೆ ಎಂಬ ಭರವಸೆಯೊಂದಿಗೆ ನಾವು ದೇವರಿಂದ ಮತ್ತು ಪ್ರಕರಣದ ಬಲಿಪಶುಗಳಿಂದ ಪದೇಪದೇ ಕ್ಷಮೆಯನ್ನು ಯಾಚಿಸುತ್ತಿದ್ದೇವೆ ಎಂದು 83ರ ಹರೆಯದ ಚರ್ಚ್ ನಾಯಕ ಹೇಳಿದ್ದಾರೆ.

ಅದೇ ಹೊತ್ತಿಗೆ ಪಾದ್ರಿಯೆಂಬ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗುವ ಪ್ರತಿ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಎಲ್ಲಾ ಕ್ರಮಗಳನ್ನು ಚರ್ಚುಗಳು ಕೈಗೊಳ್ಳಬೇಕು ಎಂದು ಬೆನೆಡಿಕ್ಟ್ ಕರೆ ನೀಡಿದ್ದಾರೆ.

ಆದರೆ ಈ ಕ್ಷಮೆಯನ್ನು ಅಮೆರಿಕಾದ ಲೈಂಗಿಕ ಕಿರುಕುಳ ಬಲಿಪಶುಗಳನ್ನು ಪ್ರತಿನಿಧಿಸುತ್ತಿರುವ ಸಂಘಟನೆಯೊಂದು ತಳ್ಳಿ ಹಾಕಿದ್ದು, ತೃಪ್ತಿದಾಯಕವಲ್ಲ ಮತ್ತು ನಿರಾಸೆಯಾಗಿದೆ ಎಂದಿದೆ.

ಅವರು ಪಾದ್ರಿಗಳ ಕಲಿಕಾ ಕೇಂದ್ರಗಳ ಸ್ವರೂಪದ ಬಗ್ಗೆ ಮಾತನಾಡಿದ್ದಾರೆ. ಕಿರುಕುಳಕ್ಕೊಳಗಾಗಿರುವವರಿಂದ ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಇದು ಪ್ರಸಕ್ತ ಮಕ್ಕಳನ್ನು ಸುರಕ್ಷಿತವಾಗಿಡಲು ಯಾವುದೇ ರೀತಿಯಲ್ಲಿ ಸಹಕಾರವಲ್ಲ ಎಂದು ಬಲಿಪಶುಗಳ ಸಂಘಟನೆ ಮುಖ್ಯಸ್ಥ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ