ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮರ್ಲಿನ್ ಮನ್ರೋ ಸೆಕ್ಸ್ ಪಾರ್ಟಿಯಲ್ಲಿ ಕೆನಡಿ ಸಹೋದರರು! (Edward Kennedy | FBI | John F Kennedy | Marilyn Monroe)
Bookmark and Share Feedback Print
 
ದುರಂತ ಅಂತ್ಯ ಕಂಡ ಜಗತ್ ಸುಂದರಿ ಮರ್ಲಿನ್ ಮನ್ರೋ ಜತೆ ಸಂಬಂಧ ಹೊಂದಲು ಅಮೆರಿಕಾ ಅಧ್ಯಕ್ಷರೂ ಸೇರಿದಂತೆ ಹತ್ತು ಹಲವು ಪುರುಷರು ತುದಿಗಾಲಲ್ಲಿ ನಿಂತಿದ್ದರೆಂಬುದನ್ನೆಲ್ಲ ಕೇಳಿದವರಿಗೆ ಇದೀಗ ಅಮೆರಿಕಾದ ಮಾಜಿ ಸೆನೆಟರ್ ಎಡ್ವರ್ಡ್ ಕೆನಡಿಯ ಹೆಸರು ಹೊಸತು. ಅವರು ಕೂಡ ಮನ್ರೋ ಜತೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಎಫ್‌ಬಿಐ ದಾಖಲೆಗಳು ಬಹಿರಂಗಪಡಿಸಿವೆ.

ಜಾನ್ ಎಫ್. ಕೆನಡಿ (ಅಮೆರಿಕಾದ ಮಾಜಿ ಅಧ್ಯಕ್ಷ) ಮತ್ತು ರಾಬರ್ಟ್ ಕೆನಡಿ (ಮಾಜಿ ಸೆನೆಟರ್) ಸಹೋದರನಾಗಿರುವ ಎಡ್ವರ್ಡ್ ಕೆನಡಿಯವರು ಫ್ರಾಂಕ್ ಸಿನಾತ್ರಾ ಮತ್ತು ಸಾಮ್ಮಿ ಡೇವಿಸ್ ಜೂನಿಯರ್ ಅವರ 'ರಾಟ್ ಪ್ಯಾಕ್'ನಲ್ಲಿದ್ದ ನಟಿ, ಮಾಡೆಲ್ ಮರ್ಲಿನ್ ಮನ್ರೋ ಜತೆ ದೈಹಿಕ ಸಂಬಂಧ ಹೊಂದಿದ್ದರು ಎಂಬ ಹಳೆ ಸತ್ಯವನ್ನು ಇದೀಗ ಎಫ್‌ಬಿಐ ಹೊರಗೆಡವಿದೆ.

ಜಾನ್ ಎಫ್. ಕೆನಡಿಯವರು ಮನ್ರೋ ಜತೆ ಸಂಬಂಧ ಹೊಂದಿರುವುದು ಇದಕ್ಕೂ ಮೊದಲೇ ಜಗಜ್ಜಾಹೀರಾಗಿತ್ತು. ಆದರೆ ಎಫ್‌ಬಿಐ ದಾಖಲೆಗಳ ಪ್ರಕಾರ ಈ ಮೂವರೂ ಸಹೋದರರು ಸಿನಾತ್ರಾ ಮತ್ತು ಡೇವಿಸ್ ಜತೆಗೂಡಿ ಆಕೆಯ ಜತೆ ಸೆಕ್ಸ್ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು.

ನ್ಯೂಯಾರ್ಕ್‌ನ ಮಹಿಳೆಯೊಬ್ಬರು 1965ರಲ್ಲಿ ಬರೆದಿದ್ದ ಟಿಪ್ಪಣಿಯೊಂದರ ಪ್ರಕಾರ ಕೆನಡಿ ಸಹೋದರರಾದ ಜಾನ್ ಮತ್ತು ರಾಬರ್ಟ್, ಮನ್ರೋ, ಸಿನಾತ್ರಾ ಮತ್ತು ಡೇವಿಸ್ ಸೆಕ್ಸ್ ಪಾರ್ಟಿಗಳಲ್ಲಿ ತೊಡಗಿಸಿಕೊಂಡಿದ್ದ ಗಣನೀಯ ಮಾಹಿತಿಗಳು ತನ್ನಲ್ಲಿವೆ ಎಂದಿದ್ದರು ಎಂದು 'ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.

ಸ್ಪೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾದ ಮಾಜಿ ರಾಯಭಾರಿಯೊಬ್ಬರ ಮಾಜಿ ಶ್ರೀಮಂತ ಪತ್ನಿ ಜಾಕ್ವಲಿನ್ ಹಮ್ಮೋಂಡ್ ಅವರಿಗೆ ಈ ಸೆಕ್ಸ್ ಪಾರ್ಟಿಗಳ ಕುರಿತು ಸಂಪೂರ್ಣ ಮಾಹಿತಿಯಿತ್ತು. ನ್ಯೂಯಾರ್ಕ್ ನಗರದ ಅಪ್ಪರ್ ಈಸ್ಟ್ ಸೈಡ್‌ನ 'ಕಾರ್ಲೈಲ್ ಹೊಟೇಲ್'ನಲ್ಲಿ ಇಂತಹ ಪಾರ್ಟಿಗಳು ನಡೆಯುತ್ತಿದ್ದವು ಎಂದು ಆಕೆಯ ಟಿಪ್ಪಣಿಯನ್ನು ಆಧರಿಸಿ ವರದಿ ಮಾಡಲಾಗಿದೆಯಾದರೂ, ದಾಖಲೆಗಳಲ್ಲಿನ ಸಂಪೂರ್ಣ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ.

ವರದಿಗಳ ಪ್ರಕಾರ ಈ ಹೊಟೇಲ್‌ನಲ್ಲಿ ಜಾನ್ ಎಫ್ ಕೆನಡಿಯವರು ಎರಡು ಬೆಡ್‌ರೂಂಗಳ ಅಪಾರ್ಟ್‌ಮೆಂಟ್ ಹೊಂದಿದ್ದರು. ಮರ್ಲಿನ್ ಮನ್ರೋ 'ಹ್ಯಾಪೀ ಬರ್ತ್‌ಡೇ, ಮಿಸ್ಟರ್ ಪ್ರೆಸಿಡೆಂಟ್..' ಎಂದು ತನ್ನ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಾಡಿದ ನಂತರ ಅದೇ ಕೋಣೆಯಲ್ಲಿ ಕೆನಡಿಯವರು ಮನ್ರೋ ಜತೆ ರಾತ್ರಿಯನ್ನು ಕಳೆದಿದ್ದರು.

ಸರಿಸುಮಾರು ಅರ್ಧಶತಮಾನಗಳಷ್ಟು ಕಾಲ ಅಮೆರಿಕಾ ಸೆನೆಟರ್ ಆಗಿದ್ದ ಎಡ್ವರ್ಡ್ ಕೆನಡಿಯವರು ಕಳೆದ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ