ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2.71 ಕೋಟಿ ಮಂದಿ ಬಲವಂತದ ಸ್ಥಳಾಂತರ: ವಿಶ್ವಸಂಸ್ಥೆ (UN | forcibly displaced | Pakistan | UNHCR)
Bookmark and Share Feedback Print
 
ತಮ್ಮ ದೇಶದಲ್ಲೇ ಬಲವಂತದಿಂದ ಸ್ಥಳಾಂತರಗೊಂಡವರ ಸಂಖ್ಯೆ 2009ರಲ್ಲಿ ಶೇ.4ರಷ್ಟು ಹೆಚ್ಚಾಗಿದ್ದು, 2.71 ಕೋಟಿಗೆ ತಲುಪಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಪಾಕಿಸ್ತಾನ, ಸೋಮಾಲಿಯಾ ಮತ್ತು ಕಾಂಗೋ ಗಣರಾಜ್ಯದಲ್ಲಿನ ನಿರಂತರ ಸಂಘರ್ಷಗಳಿಂದಾಗಿ ಒಟ್ಟಾರೆ ಸಂಖ್ಯೆ ಹೆಚ್ಚಳ ಕಂಡಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಅದೇ ಹೊತ್ತಿಗೆ ವಿಶ್ವದಾದ್ಯಂತದ ನಿರಾಶ್ರಿತರ ಸಂಖ್ಯೆ 1.52 ಕೋಟಿಗಳಲ್ಲೇ ಸ್ಥಿರವಾಗಿ ಉಳಿದುಕೊಂಡಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ರಾಯಭಾರಿ ತನ್ನ '2009ರ ಜಾಗತಿಕ ಧೋರಣೆ ವರದಿ'ಯಲ್ಲಿ ತಿಳಿಸಿದ್ದಾರೆ.

ವಿಶ್ವದ 1.52 ಕೋಟಿ ನಿರಾಶ್ರಿತರಲ್ಲಿ ಕೇವಲ 2.51 ಲಕ್ಷ ಮಂದಿ ಮಾತ್ರ ತಮ್ಮ ಮನೆಗಳಿಗೆ 2009ರಲ್ಲಿ ಮರಳಿದ್ದಾರೆ. ಇದು ಕಳೆದ 20 ವರ್ಷಗಳಲ್ಲೇ ಅತೀ ಕಡಿಮೆ ಪ್ರಮಾಣದ್ದು.

ಕೈಗಾರಿಕೀರಣಕ್ಕೊಳಗಾಗಿರುವ ದೇಶಗಳ ಕಾರಣದಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ವಿಶ್ವದ ಪ್ರಮುಖ ನಗರಗಳಲ್ಲಿ ನಿರಾಶ್ರಿತ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೂ ಕಳೆದೊಂದು ದಶಕದ ಅವಧಿಯಲ್ಲಿ 10.3 ಲಕ್ಷ ನಿರಾಶ್ರಿತರಿಗೆ ನೆಲೆ ಒದಗಿಸಲಾಗಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಅಮೆರಿಕಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಅಫಘಾನಿಸ್ತಾನ, ಸೋಮಾಲಿಯಾ, ಕಾಂಗೋಗಳಲ್ಲಿನ ಸಂಘರ್ಷಗಳು ಕಡಿಮೆಯಾಗುತ್ತಿವೆ ಎಂದೂ ವರದಿಯಲ್ಲಿ ವಿವರಣೆ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ