ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಸ್ತ್ರಾಸ್ತ್ರ ಖರೀದಿ ಆರೋಪ: ಫೋನ್ಸೆಕಾರನ್ನ ಕೋರ್ಟ್‌ಗೆ ಹಾಜರುಪಡಿಸಿ (Sarath Fonseka | Colombo | Army chief | Tilakaratne)
Bookmark and Share Feedback Print
 
ಶ್ರೀಲಂಕಾದ ಮಿಲಿಟರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿರುವ ಸರತ್ ಫೋನ್ಸೆಕಾ ಅವರನ್ನು ಮುಂದಿನ ವಾರದೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೊಲಂಬೊ ಕೋರ್ಟ್ ಬುಧವಾರ ಸರ್ಕಾರಕ್ಕೆ ಸೂಚಿಸಿದೆ.

ಸರತ್ ಫೋನ್ಸೆಕಾ ಅವರು ಆರ್ಮಿ ವರಿಷ್ಠರಾಗಿದ್ದ ಸಮಯದಲ್ಲಿ ಕೋಟ್ಯಂತರ ರೂಪಾಯಿ ಶಸ್ತ್ರಾಸ್ತ್ರ ಖರೀದಿ ಮಾಡಿರುವ ಅವ್ಯವಹಾರದ ಪ್ರಕರಣದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಕೊಲಂಬೊ ಮ್ಯಾಜಿಸ್ಟ್ರೇಟ್ ಕೋರ್ಟ್ ತಿಲಕರತ್ನೆ ವಿರುದ್ದ ಬಂಧನದ ವಾರಂಟ್ ಜಾರಿಗೊಳಿಸಿತ್ತು.

ಫೋನ್ಸೆಕಾ ಅವರ ಅಳಿಯನಾಗಿರುವ ದಾನುನಾ ತಿಲಕರತ್ನೆ ಇದೀಗ ತಲೆಮರೆಸಿಕೊಂಡಿದ್ದಾನೆ. ತಿಲಕ್‌ರತ್ನೆ ಹಿಕಾರ್ಪ್ ಇಂಟರ್‌ನ್ಯಾಷನಲ್ ಕಂಪನಿಯ ಅಧ್ಯಕ್ಷನಾಗಿದ್ದ. ಕಳೆದ ವರ್ಷ ಶ್ರೀಲಂಕಾ ಸರ್ಕಾರ ಎಲ್‌ಟಿಟಿಇ ಅಂತಿಮ ಸಮರ ಸಾರಿದ್ದ ವೇಳೆ ಈ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ನಡೆದಿತ್ತು.

ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತ ನಿವೃತ್ತ ಆರ್ಮಿ ವರಿಷ್ಠ ಸರತ್ ಫೋನ್ಸೆಕಾರನ್ನು ಜೂನ್ 23ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೊಲಂಬೊ ಮ್ಯಾಜಿಸ್ಟ್ರೇಟ್ ಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ